ಮಿಲ್ಕ್ ಶೇಕ್ ತುಂಬಾ ರುಚಿಯಾಗಿರುತ್ತೆ. ಹಾಗೆ ಇದನ್ನು ತಯಾರಿಸುವುದು ಕೂಡ ಬಹಳ ಸುಲಭ. ನೀವು ತುಂಬಾ ಬಗೆಯ ಮಿಲ್ಕ್ ಶೇಕ್ ಕುಡಿದಿರುತ್ತೀರಿ. ಇಂದು ನಾವು ನಿಮಗೆ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಕರ್ಜೂರ ಮತ್ತು ಕಾಫಿ ಮಿಲ್ಕ್ ಶೇಕ್ ಮಾಡೋದು ಹೇಗೆ ಎಂದು ತಿಳಿಸುತ್ತೇವೆ.
ಮಿಲ್ಕ್ ಶೇಕ್ ಮಾಡಲು ಬೇಕಾಗುವ ಪದಾರ್ಧ :
1 ಕಪ್ ಕರ್ಜೂರ
10 ದೊಡ್ಡ ಚಮಚ ಕಾಫಿ ಪೌಡರ್
6 ಕಪ್ ಹಾಲು
5-6 ಏಲಕ್ಕಿ
3 ಚಮಚ ಸಕ್ಕರೆ
¾ ಕಪ್ ತಾಜಾ ಕ್ರೀಂ
ಮಿಲ್ಕ್ ಶೇಕ್ ಮಾಡುವ ವಿಧಾನ :
ಮೊದಲು ಒಂದು ಪಾತ್ರೆಗೆ ನೀರು ಮತ್ತು ಕಾಫಿ ಪೌಡರ್ ಹಾಕಿ ಬಿಸಿ ಮಾಡಿಕೊಳ್ಳಿ.
ನಂತ್ರ ಇದಕ್ಕೆ ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ. ಸಕ್ಕರೆ ಕರಗುವವರೆಗೂ ಕೈ ಆಡಿಸುತ್ತಿರಿ.
ಗ್ಯಾಸ್ ಬಂದ್ ಮಾಡಿ ಮಿಶ್ರಣ ತಣ್ಣಗಾಗುವವರೆಗೆ ಬದಿಗಿಡಿ.
ಕರ್ಜೂರಕ್ಕೆ ಸ್ವಲ್ಪ ಹಾಲು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಕಾಫಿ ಪುಡಿ ಮಿಶ್ರಣ, ಹಾಲು ಹಾಗೂ ಕ್ರೀಂ ಹಾಕಿ. ನಂತ್ರ ಸರಿಯಾಗಿ ಮಿಕ್ಸ್ ಮಾಡಿ. ಇಷ್ಟು ಮಾಡಿದ್ರೆ ಮಿಲ್ಕ್ ಶೇಕ್ ಸಿದ್ಧ.