ಆರೋಗ್ಯವಾಗಿರಲು ಒಳ್ಳೆ ಆಹಾರದ ಅವಶ್ಯಕತೆಯಿದೆ. ತರಕಾರಿ ಸೂಪ್ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕ ನಿಯಂತ್ರಣಕ್ಕೂ ಇದು ಸಹಕಾರಿ.
ತರಕಾರಿ ಸೂಪ್ ತಯಾರಿಸಲು ಬೇಕಾಗುವ ಪದಾರ್ಥ :
ತರಕಾರಿ – ಟೊಮ್ಯಾಟೊ, ಕ್ಯಾರೆಟ್, ಬಟಾಣಿ ಮತ್ತು ಫ್ರೆಂಚ್ ಬೀನ್ಸ್ 3 ಕಪ್
ನೀರು – 2 ಕಪ್
ಎಣ್ಣೆ – 1 ಚಮಚ
ಕರಿಬೇವಿನ ಎಲೆಗಳು – 4-5 ಎಲೆಗಳು
ಜೀರಿಗೆ ಪುಡಿ – 1/2 ಚಮಚ
ರುಚಿಗೆ ಉಪ್ಪು
ಕರಿಮೆಣಸಿನ ಪುಡಿ – ಒಂದು ಚಿಟಕಿ
ತರಕಾರಿ ಸೂಪ್ ತಯಾರಿಸುವ ವಿಧಾನ :
ಎಲ್ಲಾ ತರಕಾರಿಗಳು ಮತ್ತು 2 ಕಪ್ ನೀರನ್ನು ಪ್ರೆಶರ್ ಕುಕ್ಕರ್ನಲ್ಲಿ ಬೇಯಿಸಿ. ತರಕಾರಿಗಳು ಕರಗಿದ ನಂತ್ರ ಅದನ್ನು ಬ್ಲೆಂಡ್ ನೊಂದಿಗೆ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಜರಡಿ ಹಿಡಿಯಿರಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಕರಿಬೇವಿನ ಎಲೆಗಳು, ಜೀರಿಗೆ ಮತ್ತು ಕರಿಮೆಣಸಿನ ಪುಡಿ ಹಾಕಿ ರೋಸ್ಟ್ ಮಾಡಿ. ನಂತ್ರ ಉಪ್ಪು ಹಾಕಿ. ನಂತ್ರ ತರಕಾರಿ ಮಿಶ್ರಣವನ್ನು ಒಗ್ಗರಣೆಗೆ ಹಾಕಿ. ಸರ್ವಿಂಗ್ ಬೌಲ್ ಗೆ ಸೂಪ್ ಹಾಕಿ ಸರ್ವ್ ಮಾಡಿ.