ಕೊರೊನಾ ವೈರಸ್ ಸಂದರ್ಭದಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದ ಸೇರಿದಂತೆ ಎಲ್ಲೆಡೆ ಆರೋಗ್ಯದ ಬಗ್ಗೆ ಮಾಹಿತಿ ಹರಿದಾಡ್ತಿದೆ. ಆದ್ರೆ ಇದ್ರಲ್ಲಿ ಬರುವ ಎಲ್ಲ ಮಾಹಿತಿ ಸತ್ಯವಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳು ಎಲ್ಲರಿಗೂ ಅನ್ವಯವಾಗುವುದಿಲ್ಲ.
ಸಾಮಾನ್ಯವಾಗಿ ಫಿಟ್ನೆಸ್ ತಜ್ಞರು, ದಿನಕ್ಕೆ 10 ಸಾವಿರ ಹೆಜ್ಜೆ ನಡೆಯುವಂತೆ ಸಲಹೆ ನೀಡುತ್ತಾರೆ. ಆದ್ರೆ ಫಿಟ್ನೆಸ್ ಗೆ 10 ಸಾವಿರ ಹೆಜ್ಜೆ ನಡೆಯಬೇಕೆಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಇದು ಎಲ್ಲರ ಆರೋಗ್ಯಕ್ಕೂ ಸರಿ ಹೊಂದಬೇಕೆಂದೇನಿಲ್ಲ. 20 ವರ್ಷ ವಯಸ್ಸಿನ ಯುವಕರಿಗೆ 10 ಸಾವಿರ ಹೆಜ್ಜೆ ತುಂಬಾ ಕಡಿಮೆ. 60 ವರ್ಷ ವಯಸ್ಸಿನವರಿಗೆ 10 ಸಾವಿರ ಹೆಜ್ಜೆ ತುಂಬಾ ಹೆಚ್ಚು. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಆಫ್ ಅಮೆರಿಕಾ, ಪ್ರತಿ ದಿನ ಸರಾಸರಿ 5 ಸಾವಿರ ಹೆಜ್ಜೆ ಸಾಕು ಎಂದಿದ್ದಾರೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರ ಜೊತೆಗೆ ಮಾನಸಿಕವಾಗಿ ಆರೋಗ್ಯಕ್ಕೆ, ಮಧುಮೇಹ ಮತ್ತು ಹೃದ್ರೋಗದಂತಹ ಕಾಯಿಲೆಗಳನ್ನು ತಪ್ಪಿಸಲು ನಿದ್ರೆ ಬಹಳ ಮುಖ್ಯ. ಆದರೆ ಪ್ರತಿದಿನ ಎಷ್ಟು ಗಂಟೆಗಳ ನಿದ್ರೆ ಅಗತ್ಯ ಎಂಬುದು ಅವರ ದೇಹವನ್ನು ಅವಲಂಬಿಸಿರುತ್ತದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ಆರೋಗ್ಯವಂತ ವಯಸ್ಕರು ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ಮಲಗಬೇಕು. ಮಕ್ಕಳಿಗೆ ಇನ್ನೂ ಹೆಚ್ಚಿನ ನಿದ್ರೆ ಅಗತ್ಯವಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು 7 ರಿಂದ 8 ಗಂಟೆಗಳ ಕಾಲ ಮಲಗಬೇಕು. ದಿನಕ್ಕೆ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರು ವೃದ್ಧಾಪ್ಯದಲ್ಲಿ ಬುದ್ಧಿಮಾಂದ್ಯತೆಯ ಶೇಕಡಾ 30 ರಷ್ಟು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ದೇಹಕ್ಕೆ ನೀರು ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ, ವ್ಯಕ್ತಿಯ ದೇಹಕ್ಕೆ ಎಷ್ಟು ನೀರು ಬೇಕು ಎಂಬುದು ಆತನ ಬದುಕಿನ ಶೈಲಿಯನ್ನು ಅವಲಂಬಿಸಿರುತ್ತದೆ. ಚಹಾ, ಕಾಫಿ, ಹಣ್ಣಿನ ರಸ ಮತ್ತು ತರಕಾರಿಗಳನ್ನು ನೀರಿನ ಜೊತೆಗೆ ಸೇವಿಸುತ್ತೇವೆ. ಇದರಿಂದಾಗಿ ದೇಹಕ್ಕೆ ಅಗತ್ಯವಾದ ನೀರು ಸಿಗುತ್ತದೆ. ಆದ್ದರಿಂದ ಪ್ರತಿದಿನ 8 ಗ್ಲಾಸ್ ನೀರು ಎಲ್ಲರಿಗೂ ಅನಿವಾರ್ಯವಲ್ಲ.