ತೂಕ ಇಳಿಸಲು ಜನರು ಸಾಕಷ್ಟು ಕಸರತ್ತುಗಳನ್ನು ಮಾಡ್ತಾರೆ. ತೂಕ ಹೆಚ್ಚಾದವರಿಗೆ ಕೊರೊನಾ ಕಾಡೋದು ಹೆಚ್ಚು ಎಂಬ ಭಯವೂ ಇತ್ತೀಚಿಗೆ ಶುರುವಾಗಿದೆ. ತೂಕ ಇಳಿಸಿಕೊಳ್ಳಲು ವ್ಯಾಯಾಮ, ಡಯಟ್ ಮಾಡಿದ್ರೆ ಸಾಲದು. ಜೀರ್ಣಾಂಗ ಕ್ರಿಯೆ ಸರಿಯಾಗಿದ್ದರೆ ತೂಕ ಇಳಿಸುವುದು ಸುಲಭವಾಗುತ್ತದೆ. ತೂಕ ಇಳಿಸಲು ಬಯಸುವವರು ಜೀರಿಗೆ, ಅಜ್ವೈನದ ನೀರು ಸೇವನೆ ಮಾಡಬೇಕು.
ಒಂದು ಚಮಚ ಜೀರಿಗೆ, ಒಂದು ಚಮಚ ಅಜ್ವೈನ ಮತ್ತು ಒಂದು ಲೋಟ ನೀರು ಬೇಕಾಗುತ್ತದೆ. ಜೀರಿಗೆ ಹಾಗೂ ಅಜ್ವೈನವನ್ನು ನೀರಿನಲ್ಲಿ ಹಾಕಿ 3-4 ಗಂಟೆ ಕಾಲ ನೆನೆಸಿಡಬೇಕು. ನಂತ್ರ ಐದು ನಿಮಿಷ ನೀರನ್ನು ಕುದಿಸಬೇಕು. ನಂತ್ರ ಫಿಲ್ಟರ್ ಮಾಡಿ ನೀರು ಬಿಸಿಯಿರುವಾಗಲೇ ಸೇವನೆ ಮಾಡಬೇಕು.
ಇದ್ರ ರುಚಿ ಹೆಚ್ಚಾಗಬೇಕೆಂದು ಬಯಸುವವರು ಈ ನೀರಿಗೆ ನಿಂಬೆ, ಜೇನುತುಪ್ಪ ಅಥವಾ ಬೆಲ್ಲವನ್ನು ಹಾಕಬೇಕು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಬೇಕು. ಬೊಜ್ಜು ಕಡಿಮೆ ಮಾಡಿ ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುತ್ತದೆ.