ಅಲರ್ಜಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಈಗ ದೊಡ್ಡ ಸಮಸ್ಯೆಯೇ ಅಲ್ಲ. ಏಕೆಂದರೆ ಅವುಗಳನ್ನು ಬಗೆಹರಿಸುವ ಹಲವು ಔಷಧಗಳು ನಮ್ಮ ಅಡುಗೆ ಮನೆಯಲ್ಲೇ ಇರುತ್ತವೆ.
ಅಲರ್ಜಿ ಇರುವವರು ನಿತ್ಯ ಬೆಳಗೆದ್ದು ಖಾಲಿ ಹೊಟ್ಟೆಗೆ ಒಂದು ಚಮಚ ಜೇನುತುಪ್ಪ ಸೇವಿಸಿ. ಇದರಿಂದ ನಿಮ್ಮ ಹಲವು ಬಗೆಯ ಅಲರ್ಜಿಗಳು ದೂರವಾಗುತ್ತವೆ.
ಇನ್ನು ವಿಟಮಿನ್ ಸಿ ಸೇವಿಸಿ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಟಾಕ್ಸಿನ್ ಗುಣಗಳಿದ್ದು ನಿಮ್ಮ ಆರೋಗ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ವಿಧಾನ ಅನುಸರಿಸುವುದಾದರೆ ಕನಿಷ್ಠ 2 ತಿಂಗಳು ನೀವು ವಿಟಮಿನ್ ಸಿ ಹೇರಳವಾಗಿರುವ ವಸ್ತುಗಳನ್ನು ಸೇವಿಸಬೇಕು.
ಅರೋಮಾ ಥೆರಪಿಯೂ ಅತ್ಯುತ್ತಮವಾಗಿ ಕೆಲಸ ಮಾಡಬಲ್ಲದು. ಲ್ಯಾವೆಂಡರ್ ಹನಿಗೆ ಪೆಪ್ಪರ್ ಮಿಂಟ್ ಎಸೆನ್ಸಿಯಲ್ ಆಯಿಲ್ ಬೆರೆಸಿ ಕಾಲಿನ ಕೆಳಭಾಗಕ್ಕೆ ಹಚ್ಚಿ ಮಲಗಿ. ರೋಸ್ ವಾಟರ್ ಅನ್ನು ಇನ್ ಹೇಲರ್ ಮಾಡುವ ಮೂಲಕವೂ ಅಲರ್ಜಿ ಸಮಸ್ಯೆಯನ್ನು ದೂರ ಮಾಡಬಹುದು.