alex Certify ದೇಹದ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಎಳನೀರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಎಳನೀರು

ಎಳನೀರು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈಗಂತೂ ಬೇಸಿಗೆ ಕಾಲ ಆಗಿರೋದ್ರಿಂದ ಬಹುತೇಕ ಮಂದಿ ಎಳನೀರನ್ನ ಸೇವನೆ ಮಾಡ್ತಾರೆ. ಈ ಎಳನೀರು ತೂಕ ಇಳಿಕೆ ಕಾರ್ಯದಲ್ಲೂ ಪ್ರಮುಖ ಪಾತ್ರ ವಹಿಸುತ್ತೆ. ಇದರಲ್ಲಿ ವಿಟಾಮಿನ್​, ಪೊಟ್ಯಾಷಿಯಂ, ಫೈಬರ್​, ಕ್ಯಾಲ್ಶಿಯಂ, ಮ್ಯಾಗ್ನಿಷಿಯಂ ಹಾಗೂ ಮಿನರಲ್​ ಅಡಗಿದೆ. ಇದೇ ಕಾರಣಕ್ಕೆ ಎಳನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ತೆಂಗಿನಕಾಯಿಯಲ್ಲಿ 94 ಪ್ರತಿಶತ ನೀರಿದೆ. ಇದರಲ್ಲಿ ಕೊಬ್ಬಿನ ಅಂಶ ತುಂಬಾನೇ ಕಡಿಮೆ. ಎಳನೀರಿನಲ್ಲಿ 250 ಎಂಎಲ್​​ ಜೀವಸತ್ವ ಅಡಗಿದೆ.
ಕಿಡ್ನಿ ಕಲ್ಲಿನ ಸಮಸ್ಯೆ ಹೊಂದಿರುವವರಿಗೆ ವೈದ್ಯರೇ ಎಳನೀರನ್ನ ಸೇವಿಸಿ ಅಂತಾ ಸಲಹೆ ನೀಡ್ತಾರೆ. ಇದರಿಂದ ಕಿಡ್ನಿ ಕಲ್ಲು ಮೂತ್ರದ ಮೂಲಕ ಹೊರ ಹೋಗುತ್ತೆ . ಕಿಡ್ನಿಯಲ್ಲಿರುವ ಕಲ್ಲನ್ನ ಕರಗಿಸೋ ಸಾಮರ್ಥ್ಯ ಎಳನೀರಿಗಿದೆ.

ಬೇಸಿಗೆ ಕಾಲದಲ್ಲಿ ನೀವು ಎಳನೀರನ್ನ ಕುಡಿದಷ್ಟೂ ಒಳ್ಳೆಯದು. ಇದು ನಿಮ್ಮ ದೇಹದಲ್ಲಿ ಗ್ಲುಕೋಸ್​ ಪ್ರಮಾಣವನ್ನ ಸರಿದೂಗಿಸೋದ್ರ ಜೊತೆಗೆ ನಿಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗದಂತೆ ಕಾಳಜಿ ವಹಿಸುತ್ತೆ.

ಆಸಿಡಿಟಿ, ಅಲ್ಸರ್​, ಊರಿಯೂತದಂತಹ ಸಮಸ್ಯೆಗಳಿಗೂ ಎಳನೀರಿನ ಸೇವನೆ ತುಂಬಾನೇ ಸಹಕಾರಿ. ಇದು ಮಾತ್ರವಲ್ಲದೇ ಎಳನೀರಿನಲ್ಲಿರುವ ವಿಟಾಮಿನ್​ ಸಿ, ಮ್ಯಾಗ್ನಿಷಿಯಂ ಹಾಗೂ ಪೊಟ್ಯಾಷಿಯಂ ಅಂಶ ರಕ್ತದೊತ್ತಡವನ್ನ ಸಮತೋಲನದಲ್ಲಿ ಇರಿಸುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...