ಬೇಡವೆಂದರೂ ಕೆಲವರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಬಿಡದೆ ಕಾಡುತ್ತದೆ. ಈ ಸಮಸ್ಯೆ ಇರುವವರು ಕಡ್ಡಾಯವಾಗಿ ಇವುಗಳಿಂದ ದೂರವಿರಿ.
ಹೀಗೆ ದೂರವಿಡಬೇಕಾದ ವಸ್ತುಗಳಲ್ಲಿ ಪಾಲಕ್ ಸೊಪ್ಪು ಮೊದಲನೆಯದು. ಏಕೆಂದರೆ ಇದರಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ಇವು ಕ್ಯಾಲ್ಸಿಯಂ ಅನ್ನು ಹರಳಿನ ರೂಪಕ್ಕೆ ಬದಲಾಯಿಸಿ ಸ್ಟೋನ್ ಆಗಿ ಕಿಡ್ನಿಯಲ್ಲೇ ಕುಳಿತು ಬಿಡುತ್ತವೆ. ಹಾಗಾಗಿ ಪಾಲಕ್ ಸೊಪ್ಪಿನಿಂದ ಸಾಧ್ಯವಾದಷ್ಟು ದೂರವಿರಿ.
ಕಿವಿ ಹಣ್ಣು ಸೇವಿಸಿ ಈ ಮಾರಕ ಖಾಯಿಲೆಯಿಂದ ದೂರವಿರಿ
ಬೀಟ್ ರೂಟ್, ಬೆಂಡೆ, ಗೆಣಸು ಕೂಡಾ ಇದೇ ಪ್ರಭಾವ ಬೀರುತ್ತದೆ ಎಂಬುದು ನೆನಪಿರಲಿ. ಚಿಕನ್, ಮೀನು, ಮೊಟ್ಟೆಗಳ ಸೇವನೆಯಿಂದ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ ಹೆಚ್ಚು. ಇದರಿಂದಲೂ ಕಿಡ್ನಿ ಸ್ಟೋನ್ ಉಂಟಾಗಬಹುದು.
ರಕ್ತದೊತ್ತಡ ಸಮಸ್ಯೆ ಇರುವವರು ಹೇಗೆ ಉಪ್ಪಿನಿಂದ ದೂರ ಉಳಿಯುತ್ತಿರೋ ಅದೇ ರೀತಿ ಕಿಡ್ನಿ ಸಮಸ್ಯೆ ಇರುವವರೂ ಕಡಿಮೆ ಉಪ್ಪು ಬಳಸಬೇಕು. ಚಿಪ್ಸ್ ಮೊದಲಾದ ಸಂಸ್ಕರಿತ ಆಹಾರದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾಗಿರುತ್ತದೆ.