alex Certify ಸುಲಭವಾಗಿ ತಯಾರಿಸಿ ಟೇಸ್ಟಿ​ ʼಬಟರ್​ ಸ್ಕಾಚ್​ʼ ಐಸ್​ ಕ್ರೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ತಯಾರಿಸಿ ಟೇಸ್ಟಿ​ ʼಬಟರ್​ ಸ್ಕಾಚ್​ʼ ಐಸ್​ ಕ್ರೀಂ

ಬೇಕಾಗುವ ಸಾಮಗ್ರಿ :

ಸಕ್ಕರೆ – 4 ಟೇಬಲ್​ ಸ್ಪೂನ್​, ಬೆಣ್ಣೆ – 2 ಟೇಬಲ್​ ಚಮಚ, ಗೋಡಂಬಿ – 1ಕಪ್​, ವಿಪ್ಪಿಂಗ್​ ಕ್ರೀಂ – 500 ಎಂ ಎಲ್

ಮಾಡುವ ವಿಧಾನ :

ಒಂದು ಪಾತ್ರೆಯಲ್ಲಿ ಸಕ್ಕರೆಯನ್ನ ಹಾಕಿಕೊಂಡು ಸಣ್ಣ ಉರಿಯಲ್ಲಿ ಪೂರ್ತಿ ಕರಗುವರೆಗೂ ಕಾಯಿಸಿಕೊಳ್ಳಿ. ಇದು ಸಂಪೂರ್ಣ ಕರಗಿದ ಬಳಿಕ ಬೆಣ್ಣೆಯನ್ನ ಹಾಕಿ. ಆಮೇಲೆ ಗೋಡಂಬಿ ಚೂರನ್ನ ಹಾಕಿ ಕಲಸಿ. ಗೋಡಂಬಿಗೆ ಸಕ್ಕರೆ ಮಿಶ್ರಣ ತಾಕಿದ ಬಳಿಕ ಒಂದು ಪಾರ್ಚ್​ಮೆಂಟ್​ ಪೇಪರ್​ನ ಮೇಲೆ ಇದನ್ನ ಹರಡಿಕೊಳ್ಳಿ. ಇದು ಗಟ್ಟಿಯಾದ ಬಳಿಕ ಪಾರ್ಚ್​ಮೆಂಟ್​ ಪೇಪರ್​ನಿಂದ ಅದರ ಮೇಲ್ಭಾಗವನ್ನ ಮುಚ್ಚಿ ಅದನ್ನ ಲಟ್ಟಣಿಗೆಯ ಸಹಾಯದಿಂದ ಚೂರು ಚೂರು ಮಾಡಿ.

ಇದೀಗ ಇನ್ನೊಂದು ಪಾತ್ರೆಯಲ್ಲಿ ವಿಪ್ಪಿಂಗ್​ ಕ್ರೀಂ ಹಾಕಿಕೊಳ್ಳಿ. ಇದನ್ನ ನಾಲ್ಕು ನಿಮಿಷಗಳ ಕಾಲ ಬ್ಲೆಂಡ್​ ಮಾಡಿಕೊಳ್ಳಿ. ಇದಾದ ಬಳಿಕ ಸಕ್ಕರೆ ಪುಡಿ ಹಾಕಿ ಕೊಳ್ಳಿ. ಈ ಮಿಶ್ರಣಕ್ಕೆ ಗೋಡಂಬಿ ಮಿಶ್ರಣ ಹಾಕಿ ಬ್ಲೆಂಡ್​ ಮಾಡಿಕೊಳ್ಳಿ.

ಈ ಮಿಶ್ರಣವನ್ನ ಪಾತ್ರೆಯಲ್ಲಿ ಹಾಕಿ . ಅದಕ್ಕೆ ಮುಚ್ಚಳವನ್ನ ಹಾಕಿ ಫ್ರೀಜರ್​ನಲ್ಲಿ 7 ರಿಂದ 8 ಗಂಟೆಗಳ ಕಾಲ ಇಡಿ. ಹೀಗೆ ಇದನ್ನ ಬೌಲ್​ಗೆ ಹಾಕಿ ಸರ್ವ್​ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...