alex Certify ಈ ಗಿಡ ಮನೆಯಲ್ಲಿದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಗಿಡ ಮನೆಯಲ್ಲಿದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು

ಮನೆಯ ಒಳಗಿನ ಅಂದವನ್ನ ಹೆಚ್ಚಿಸಬೇಕು ಅಂತಾ ಒಳಾಂಗಣದಲ್ಲಿ ಗಿಡಗಳನ್ನ ನೆಡೋದು ಈಗಿನ ಟ್ರೆಂಡ್​ ಆಗಿಬಿಟ್ಟಿದೆ. ಒಳಾಂಗಣದಲ್ಲಿ ಇಡಬಹುದಾದ ಗಿಡಗಳು ಮನೆಯ ಅಂದವನ್ನ ಹೆಚ್ಚಿಸೋದ್ರ ಜೊತೆಗೆ ಒಳ್ಳೆಯ ಗಾಳಿಯನ್ನೂ ನೀಡುತ್ತದೆ. ಆದರೆ ಮನೆಯ ಅಂದವನ್ನ ಹೆಚ್ಚಿಸಬೇಕು ಅಂತಾ ಕಂಡ ಕಂಡ ಗಿಡಗಳನ್ನ ತಂದರೆ ಅಪಾಯ ಫಿಕ್ಸ್ ಅನ್ನುತ್ತೆ ವಾಸ್ತುಶಾಸ್ತ್ರ. ಹಾಗಾದ್ರ ಯಾವ್ಯಾವ ಗಿಡಗಳನ್ನ ಮನೆಯ ಒಳಗಡೆ ಇಟ್ಟುಕೊಳ್ಳಬಾರದು ಅನ್ನೋದಕ್ಕೆ ಇಲ್ಲಿದೆ ಮಾಹಿತಿ.

ಹುಣಸೆ ಗಿಡ : ಹುಣಸೆಹಣ್ಣು ಹುಳಿ ಇರುತ್ತೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿರೋದೆ. ಇದರ ಎಲೆ ನೋಡೋಕೆ ಚೆನ್ನಾಗಿ ಕಾಣುತ್ತೆ ಅಂತಾ ನೀವು ಮನೆಯ ಬಾಲ್ಕನಿಯಲ್ಲಿ ಈ ಗಿಡವನ್ನ ಇಡೋಣ ಅಂತಾ ಪ್ಲಾನ್​ ಮಾಡಬೇಡಿ. ಯಾಕಂದ್ರೆ ಹುಣಸೆ ಗಿಡ ಮನೆಯಲ್ಲಿದ್ದರೆ ಮನೆಯ ಸಂತೋಷವೂ ಹುಳಿಯಾಗುತ್ತಂತೆ. ಅಲ್ಲದೇ ಇದು ಕುಟುಂಬಸ್ಥರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತೆ.

ಪಾಪಸ್​ಕಳ್ಳಿ : ಪಾಪಸ್​ಕಳ್ಳಿಯನ್ನ ಎಂದಿಗೂ ಮನೆಯ ಒಳಗಡೆ ತರಬೇಡಿ. ಈ ಪಾಪಸ್​ಕಳ್ಳಿಗಳಿಗೆ ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನ ಹೆಚ್ಚಿಸುವ ಸಾಮರ್ಥ್ಯಯಿದೆಯಂತೆ. ಅಲ್ಲದೇ ಮನೆಯ ನೆಮ್ಮದಿಯೂ ಹಾಳಾಗುತ್ತದೆ.

ತಾಳೆ ಮರ : ವಾಸ್ತು ಶಾಸ್ತ್ರದ ಪ್ರಕಾರ ತಾಳೆ ಗಿಡವನ್ನ ಮನೆಯಲ್ಲಿ ಇಡೋ ಹಾಗಿಲ್ಲ. ತಾಳೆ ಗಿಡ ಬೆಳೆದಂತೆಲ್ಲ ಮನೆಯಲ್ಲಿ ಆಸ್ತಿ ಮೌಲ್ಯ ಕಡಿಮೆಯಾಗುತ್ತಾ ಹೋಗುತ್ತಂತೆ. ಹೀಗಾಗಿ ಕುಟುಂಬಸ್ಥರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.

ಬಿದಿರು : ಪುಟಾಣಿ ಬಿದಿರು ನೋಡೋಕೆ ವರ್ಣರಂಜಿತವಾಗಿರುತ್ತೆ. ಅನೇಕರು ಇದನ್ನ ಮನೆಯ ಕಾಂಪೌಂಡ್​ಗಳ ಬಳಿಯಲ್ಲಿ ನೆಡುತ್ತಾರೆ. ಇದು ಬೇಗನೇ ಬೆಳೆಯೋದ್ರಿಂದ ಮನೆಗೆ ಭದ್ರತೆ ಕೂಡ ಸಿಗುತ್ತೆ ಅಂತಾ ಈ ರೀತಿ ಮಾಡ್ತಾರೆ. ಆದರೆ ವಾಸ್ತು ಪ್ರಕಾರ ಬಿದಿರನ ಮರವನ್ನ ಚಟ್ಟ ಮಾಡಲು ಬಳಸೋದ್ರಿಂದ ಮನೆಯಲ್ಲಿ ಇರೋದು ಸೂಕ್ತವಲ್ಲ ಎಂದು ಹೇಳಲಾಗುತ್ತೆ.

ಅಶ್ವತ್ಥ ಮರ : ಅಶ್ವತ್ಥ ಮರಕ್ಕೆ ಪೂಜನೀಯ ಸ್ಥಾನ ಇರೋದ್ರಿಂದ ಇದನ್ನ ಮನೆಯಲ್ಲಿ ನೆಟ್ಟರೂ ಒಳ್ಳೆಯದು ಎಂಬ ಅಭಿಪ್ರಾಯ ಹಲವರಲ್ಲಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಶ್ವತ್ಥ ಮರವನ್ನ ಮನೆಯ ಬಳಿ ನೆಡುವಂತಿಲ್ಲ. ಒಂದು ವೇಳೆ ಇದ್ದರೂ ಅದಕ್ಕೆ ಸೂಕ್ತ ಪೂಜಾ ಕೈಂಕರ್ಯಗಳನ್ನ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಪತ್ತು ನಾಶವಾಗಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...