ಕೃಷಿ ಭೂಮಿಯಲ್ಲಿ ಹೆಚ್ಚಿನ ಗಳಿಕೆ ಮಾಡುವ ಆಲೋಚನೆಯಲ್ಲಿದ್ದರೆ ನೀವು ತುಳಸಿ ಕೃಷಿ ಶುರು ಮಾಡಬಹುದು. ಕಡಿಮೆ ಬಂಡವಾಳದಲ್ಲಿ ಲಕ್ಷಾಂತರ ರೂಪಾಯಿ ಗಳಿಸುವ ಕೃಷಿಗಳಲ್ಲಿ ಇದು ಒಂದು. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ಇದನ್ನು ದೇವರೆಂದು ನಂಬುವ ಜನರು ಔಷಧಿಗಳಿಗೂ ಬಳಸುತ್ತಾರೆ.
ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆಯುರ್ವೇದ ಮತ್ತು ನೈಸರ್ಗಿಕ ಔಷಧಿಗಳತ್ತ ಆಕರ್ಷಿತರಾಗ್ತಿದ್ದಾರೆ. ಇದೇ ಕಾರಣಕ್ಕೆ ಔಷಧಿ ಸಸ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಔಷಧಿ ಸಸ್ಯಗಳನ್ನು ಬೆಳೆಸುವುದು ಲಾಭಕರ. ಇದ್ರಿಂದ ಸಾಕಷ್ಟು ಲಾಭವನ್ನು ನೀವು ಪಡೆಯಬಹುದು.
ಈ ವ್ಯವಹಾರವನ್ನು ಪ್ರಾರಂಭಿಸಲು ಮೊದಲೇ ಹೇಳಿದಂತೆ ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಭೂಮಿಯನ್ನು ಗುತ್ತಿಗೆ ಪಡೆದು ನೀವು ಕೃಷಿ ಶುರು ಮಾಡಬಹುದು. ನಿಮ್ಮದೆ ಭೂಮಿ ಇದ್ದರೆ ನೀವು ಕೇವಲ 15,000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಬಿತ್ತನೆ ಮಾಡಿದ 3 ತಿಂಗಳ ನಂತರ ತುಳಸಿ ಬೆಳೆ ಸರಾಸರಿ 3 ಲಕ್ಷ ರೂಪಾಯಿಗೆ ಮಾರಾಟವಾಗುತ್ತದೆ. ಮಾರುಕಟ್ಟೆಯಲ್ಲಿರುವ ಅನೇಕ ಆಯುರ್ವೇದ ಕಂಪನಿಗಳಾದ ಡಾಬರ್, ವೈದ್ಯನಾಥ್, ಪತಂಜಲಿ ಇತ್ಯಾದಿಗಳು ತುಳಸಿ ಖರೀದಿಸುತ್ತವೆ.