ಡಿಜಿಟಲ್ ಯುಗದಲ್ಲಿ ಪೆನ್ನಿನ ಮಹತ್ವ ಕಡಿಮೆಯಾಗ್ತಿದೆ. ಮೊಬೈಲ್, ಲ್ಯಾಬ್ ಟಾಪ್ ಬಳಕೆ ಹೆಚ್ಚಾಗ್ತಿದ್ದಂತೆ ಜನರು ಪೆನ್ ಬಳಕೆ ಕಡಿಮೆ ಮಾಡಿದ್ದಾರೆ. ಆದ್ರೆ ಭಾರತೀಯ ವಿದ್ಯಾರ್ಥಿಗಳ ಕೈನಲ್ಲಿ ಈಗ್ಲೂ ಪೆನ್ ಬಳಕೆಯಲ್ಲಿದೆ. ದಿನನಿತ್ಯದ ಬಳಕೆಯಲ್ಲಿ ಒಂದಾಗಿರುವ ಈ ಪೆನ್ ನಲ್ಲಿ ಸಾಕಷ್ಟು ವಿಧವಿದೆ.
ಒಂದು ಕಾಲದಲ್ಲಿ ಬರೆಯಲು ಕಲ್ಲನ್ನು ಬಳಸಲಾಗ್ತಿತ್ತು. ನಂತ್ರ ಶಾಯಿ ಮತ್ತು ನವಿಲು ಗರಿಗಳನ್ನು ಬಳಸಲಾಯ್ತು. ನಂತ್ರ ಜನರ ಜೀವನವನ್ನು ಸುಲಭಗೊಳಿಸಲು ಪೆನ್ ಕಂಡು ಹಿಡಿಯಲಾಯ್ತು. ಪೆನ್ ಆವಿಷ್ಕಾರವನ್ನು ಯಾವುದೇ ಒಬ್ಬ ವ್ಯಕ್ತಿ ಮಾಡಿಲ್ಲ. ಫೌಂಟೆನ್ ಪೆನ್ನಿನ ಮೂಲಕ ಆಧುನಿಕ ಪೆನ್ನುಗಳ ಆವಿಷ್ಕಾರವಾಯ್ತು. ಫ್ರೆಂಚ್ ಸಂಶೋಧಕ Petrache Poenaru ಕಂಡು ಹಿಡಿದ್ರು.
ಆದ್ರೆ ಈ ಕ್ಷೇತ್ರದ ಪ್ರಮುಖ ಪೆನ್ ಬಾಲ್ ಪಾಯಿಂಟ್ ಪೆನ್. ಇಬ್ಬರು ವ್ಯಕ್ತಿಗಳು ಬಾಲ್ ಪಾಯಿಂಟ್ ಪೆನ್ ಆವಿಷ್ಕಾರ ಮಾಡಿದ್ದಾರೆ. ಜಾನ್ ಜೆ. ಲೌಡ್ ಮತ್ತು ಲಾಸ್ಲೆ ಬೆರೆ. ಇದ್ರ ಆವಿಷ್ಕಾರಕ್ಕೆ ಮುಖ್ಯವಾಗಿ ಜಾನ್ ಜೆ. ಲೌಡ್ ಕಾರಣ. ಚರ್ಮದ ವಸ್ತುಗಳ ಕೆಲಸ ಮಾಡ್ತಿದ್ದ ಲೌಡ್ ಗೆ ಕತ್ತರಿಸುವ ಮೊದಲು ಗೆರೆ ಹಾಕಿಕೊಳ್ಳಬೇಕಾಗಿತ್ತು. ಫೌಂಟೇನ್ ಪೆನ್ ಹಾಗೂ ಪೆನ್ಸಿಲ್ ನಿಂದ ಇದು ಕಷ್ಟವಾಗಿತ್ತು. ತನ್ನ ಕೆಲಸಕ್ಕೆ ಸಹಾಯ ಮಾಡಬಲ್ಲ ಪೆನ್ ಕಂಡು ಹಿಡಿಯುವ ಆಲೋಚನೆ ಬಂತು.
ಪೆನ್ನನ್ನು ಯಾವಾಗ ಕಂಡು ಹಿಡಿಯಲಾಯ್ತು ಎಂಬ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. ಫೌಂಟೆನ್ ಫೆನ್ ಹಾಗೂ ಬಾಲ್ ಪೆನ್ ಗಿಂತ ಮೊದಲೇ ಜನರು ಬರವಣಿಗೆ ಮಾಡ್ತಿದ್ದರು. ಜಾನ್ ಜಾಕೋಬ್ ಲೌಡ್ 1988 ರಲ್ಲಿ ಬಾಲ್ ಪಾಯಿಂಟ್ ಪೆನ್ನುಗಳನ್ನು ಕಂಡುಹಿಡಿದರು.
ಫ್ರೆಂಚ್ ಆವಿಷ್ಕಾರಕ ಪೆಟ್ರಾಚೆ ಪೊಯೆನಾರೂ ಫೌಂಟೇನ್ ಪೆನ್ ಆವಿಷ್ಕಾರಕ್ಕಾಗಿ ಪೇಟೆಂಟ್ ಪಡೆದಿದ್ದಾರೆ. ಅವರು ಮೇ. 25,1827 ರಂದು ಪೆನ್ನು ಕಂಡುಹಿಡಿದರು. ಮೊದಲ ಬರವಣಿಗೆಯ ಶಾಯಿಯನ್ನು ಈಜಿಪ್ಟಿನವರು ಮತ್ತು ಚೀನಿಯರು ಕಂಡುಹಿಡಿದರು.