ಕೆಲವು ಮಹಿಳೆಯರಿಗೆ ಮುಟ್ಟಿನ ಅವಧಿ ಹತ್ತಿರ ಬಂದಾಗ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಇದಕ್ಕೆ ಕಾರಣ ಅವರ ದೇಹದಲ್ಲಿ ಆಗುವಂತಹ ಹಾರ್ಮೋನ್ ಅಸಮತೋಲನ. ಅವಧಿಯ ವೇಳೆ ಈಸ್ಟ್ರೋಜನ್ ಹಾರ್ಮೋನ್ ಮತ್ತು ದೇಹದಲ್ಲಿ ತೈಲ ಉತ್ಪಾದನೆ ಹೆಚ್ಚಾಗುತ್ತದೆ. ಹಾಗಾಗಿ ಮೊಡವೆಗಳು ಮೂಡುತ್ತವೆ. ಈ ಮೊಡವೆಗಳನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.
*ಟೀ ಟ್ರೀ ಆಯಿಲ್ : ಇದು ಉರಿಯೂತದ ಗುಣಗಳನ್ನು ಹೊಂದಿದ್ದು, ಮೊಡವೆಗಳನ್ನು ನಿವಾರಿಸುತ್ತದೆ. ಇದನ್ನು ನೀರಿಗೆ ಬೆರೆಸಿ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಬೇಗನೆ ಮೊಡವೆಗಳು ವಾಸಿಯಾಗುತ್ತವೆ.
*2 ಚಮಚ ಜೇನುತುಪ್ಪ ಮತ್ತು 1 ಚಮಚ ದಾಲ್ಚಿನ್ನಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ.
*ಅವಧಿ ಸಮಯದಲ್ಲಿ ಮೂಡುವ ಮೊಡವೆಗಳನ್ನು ನಿವಾರಿಸಲು ಆ್ಯಪಲ್ ಸೈಡರ್ ವಿನೆಗರ್ ಸಹಕಾರಿ. ಹಾಗಾಗಿ ಆ್ಯಪಲ್ ಸೈಡರ್ ವಿನೆಗರ್ ನ್ನು ನೀರಿಗೆ ಮಿಕ್ಸ್ ಮಾಡಿ ಅದರಿಂದ ಮುಖವನ್ನು ಸ್ವಚ್ಛಗೊಳಿಸಿ.