ಬಾತ್ ರೂಂ ಟೈಲ್ಸ್ ಅನ್ನು ಎಷ್ಟು ಸಾರಿ ಕ್ಲೀನ್ ಮಾಡಿದರೂ ಬಹಳ ಬೇಗ ಗಲೀಜಾಗುತ್ತದೆ ಮತ್ತು ಕೊಳೆ ಹಾಗೇ ಅಂಟಿಕೊಂಡಿರುತ್ತದೆ. ಇದನ್ನು ತುಂಬಾ ಉಜ್ಜಿ ತೊಳೆಯಬೇಕು ಇಲ್ಲವಾದರೆ ಅದು ಕ್ಲೀನ್ ಆಗುವುದಿಲ್ಲ. ಹಾಗಾಗಿ ಬಾತ್ ರೂಂ ಟೈಲ್ಸ್ ನ್ನು ಸುಲಭವಾಗಿ ಸ್ವಚ್ಛಗೊಳಿಸಲು ಈ ಟಿಪ್ಸ್ ಫಾಲೋ ಮಾಡಿ.
* ಬಾತ್ ರೂಂ ಸ್ವಚ್ಛಗೊಳಿಸಲು ವಿನೆಗರ್ ಬಹಳ ಸಹಕಾರಿ. ವಿನೆಗರ್ ಅನ್ನು ಟೈಲ್ಸ್ ಮೇಲೆ ಸಿಂಪಡಿಸಿ ಬಳಿಕ ಬಿಸಿ ನೀರಿನ ಸಹಾಯದಿಂದ ಅದನ್ನು ಸ್ವಚ್ಛಗೊಳಿಸಿ.
* ಬಾತ್ ರೂಂ ಟೈಲ್ಸ್ ಸ್ವಚ್ಛವಾಗಲು ಅಡುಗೆ ಸೋಡಾ ಮತ್ತು ನಿಂಬೆ ರಸ ಉತ್ತಮವಾದ ಮನೆಮದ್ದಾಗಿದೆ. ಅಡುಗೆ ಸೋಡಾ ಮತ್ತು 3 ಚಮಚ ನಿಂಬೆ ರಸವನ್ನು ಸೇರಿಸಿ ದಪ್ಪ ಮಿಶ್ರಣ ಮಾಡಿ ಅದನ್ನು ಟೈಲ್ಸ್ ಮೇಲೆ ಹಾಕಿ ಬ್ರಶ್ ಸಹಾಯದಿಂದ ಉಜ್ಜಿದರೆ ಟೈಲ್ಸ್ ಬಹಳ ಸುಲಭವಾಗಿ ಸ್ವಚ್ಛವಾಗುತ್ತದೆ.
* ಹಳೆಯದಾದ ಮತ್ತು ಮೊಂಡು ಕಲೆಗಳನ್ನು ತೆಗೆಯಲು ಹೈಡ್ರೋಜನ್ ಪೆರಾಕ್ಸೈಡ್ ಬಳಸಿ. ಅಡುಗೆ ಸೋಡಾದೊಂದಿಗೆ ಹೈಡ್ರೋಜನ್ ಪೆರಾಕ್ಸೈಡ್ ನ್ನು ಮಿಕ್ಸ್ ಮಾಡಿ ಟೈಲ್ಸ್ ಮೇಲೆ ಹಾಕಿ 10 ನಿಮಿಷ ಬಿಟ್ಟು ಸ್ವಚ್ಛಗೊಳಿಸಿ.