ತಲೆಹೊಟ್ಟು ಸಮಸ್ಯೆ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಕೂದಲು ಎಣ್ಣೆಯುಕ್ತವಾದಾಗೆಲ್ಲಾ ಅದರಲ್ಲೂ ನೆತ್ತಿಯ ಭಾಗದಲ್ಲಿ ಹೆಚ್ಚು ಎಣ್ಣೆಯಂಶ ಉಳಿಯುವುದರಿಂದ ಅಲ್ಲಿ ಸೇರಿಕೊಳ್ಳುವ ಧೂಳು ಕೊಳೆ ತಲೆಹೊಟ್ಟಾಗಿ ಬದಲಾಗುತ್ತದೆ.
ತಲೆಹೊಟ್ಟು ನಿವಾರಿಸುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ. ತೆಂಗಿನೆಣ್ಣೆಗೆ ನಿಂಬೆರಸ ಸೇರಿಸಿ. ಇದನ್ನು ನೆತ್ತಿಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಅರ್ಧ ಗಂಟೆ ಬಳಿಕ ತಲೆ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.
ಸೊಳ್ಳೆ ಕಡಿತದಿಂದ ಕಿರಿಕಿರಿಯೇ…..? ಹೀಗೆ ಮಾಡಿ…..!
ತೆಂಗಿನೆಣ್ಣೆಗೆ ಕರ್ಪೂರವನ್ನು ಪುಡಿ ಮಾಡಿ ಉದುರಿಸಿ. ಇದನ್ನು ನೆತ್ತಿ ಹಾಗೂ ತಲೆಕೂದಲಿಗೆ ಹಚ್ಚಿ ಮೂವತ್ತು ನಿಮಿಷದ ಬಳಿಕ ತಲೆ ತೊಳೆಯುವುದರಿಂದಲೂ ನಿಮ್ಮ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ.
ಅಲೋವೆರಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು ನಿಮ್ಮ ತಲೆಹೊಟ್ಟಿನ ಸಮಸ್ಯೆ ಮತ್ತಷ್ಟು ಹೆಚ್ಚದಂತೆ ಇದು ನೋಡಿಕೊಳ್ಳುತ್ತದೆ. ಇದರ ಒಳಭಾಗದ ಜೆಲ್ ಆನ್ನು ವಾರಕ್ಕೆ ಮೂರರಿಂದ ನಾಲ್ಕು ಬಾರಿ ತಲೆಗೆ ಹಚ್ಚಿಕೊಳ್ಳಿ. ತಲೆ ತೊಳೆಯಲು ಕಷ್ಟ ಎನಿಸಿದರೆ ತೆಂಗಿನೆಣ್ಣೆ ಹಚ್ಚಿ. ಇದರಿಂದ ತಲೆಹೊಟ್ಟು ಸಮಸ್ಯೆಗೆ ನೀವು ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.