ಉಳಿದೆಲ್ಲಾ ಸಾಮಾನುಗಳಿಗೆ ಹೋಲಿಸಿದರೆ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮನೆಗೆ ತರುತ್ತೇವೆ. ಇಪ್ಪತ್ತೈದು ಕೆಜಿ ಅಕ್ಕಿಯನ್ನು ಮನೆಗೆ ತಂದರೆ ಹಲವು ದಿನಗಳ ತನಕ ಅದನ್ನು ಹಾಳಾಗದಂತೆ ನೋಡಿಕೊಳ್ಳಬೇಕಾಗುತ್ತದೆ.
ಅಂಥ ಸಂದರ್ಭದಲ್ಲಿ ಅಕ್ಕಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಡಿ. ನಿತ್ಯ ಅದನ್ನೇ ತೆಗೆದು ಮುಚ್ಚುವ ಬದಲು ಸಣ್ಣ ಡಬ್ಬಿಯಲ್ಲಿ ಸ್ವಲ್ಪ ಅಕ್ಕಿ ಹಾಕಿಡಿ. ನಿತ್ಯ ಅದನ್ನೇ ಬಳಸಿ.
ಅಕ್ಕಿಯ ಡಬ್ಬಿಯ ಅಡಿಭಾಗದಲ್ಲಿ ಇರುವೆ ಅಥವಾ ಇತರ ಕೀಟಾಣುಗಳು ಬರದಂತೆ ತಡೆಯಲು ನಾಲ್ಕು ಬ್ಯಾಡಗಿ ಮೆಣಸನ್ನು ಅಥವಾ ಬೇವಿನ ಎಲೆಯನ್ನು ಹಾಕಿಡಿ. ಇದರಿಂದ ಅಕ್ಕಿ ಬೇಗ ಹಾಳಾಗುವುದಿಲ್ಲ.
ದೀರ್ಘ ಕಾಲ ಸಂಗ್ರಹಿಸುವುದು ಅನಿವಾರ್ಯವಾದರೆ ತಿಂಗಳಿಗೊಮ್ಮೆ ಆಕ್ಕಿಯನ್ನು ಬಿಸಿಲಿಗಿಡಿ. ಅಕ್ಕಿ ಕೊಂಚ ಬೆಚ್ಚಗಾದರೂ ಸಾಕು. ಅದರೊಂದಿಗೆ ಅಕ್ಕಿ ಸಂಗ್ರಹಿಸಿಡುವ ಜಾಗದಲ್ಲಿ ನೀರಿನ ಪಸೆ ಇಲ್ಲದಂತೆ ನೋಡಿಕೊಳ್ಳಿ. ಈ ಜಾಗ ಬೆಚ್ಚಗಿದ್ದಷ್ಟು ಒಳ್ಳೆಯದು.