ಒತ್ತಡದ ಜೀವನಶೈಲಿಯಿಂದಾಗಿ ಬಹುತೇಕ ಮಂದಿ ತಮ್ಮ ಆರೋಗ್ಯದ ಕಡೆ ಗಮನಹರಿಸೋದೇ ಇಲ್ಲ. ಇದರಿಂದಾಗಿ ಆಸಿಡಿಟಿಯಂತಹ ಸಮಸ್ಯೆ ಉದ್ಭವಿಸುತ್ತೆ. ಇದರಿಂದಾಗಿ ಹೊಟ್ಟೆನೋವು, ತಲೆ ನೋವು ಉಂಟಾಗುತ್ತೆ.
ಈ ಸಮಸ್ಯೆಯಿಂದ ಪಾರಾಗೋಕೆ ನೀವು ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಿ. ಆದಷ್ಟು ಮಸಾಲೆಯುಕ್ತ ಆಹಾರ ಸೇವನೆಯನ್ನ ಕಡಿಮೆ ಮಾಡಿ. ರಸ್ತೆ ಬದಿಯಲ್ಲಿ ತಯಾರಿಸಿದ ಆಹಾರಗಳಲ್ಲಿ ಪೋಷಕಾಂಶಗಳು ಬಹಳ ಕಡಿಮೆ ಪ್ರಮಾಣದಲ್ಲಿ ಇರುತ್ತೆ. ಅಲ್ಲದೇ ಅವುಗಳು ಶುದ್ಧವಾಗಿ ಕೂಡ ಇರೋದಿಲ್ಲ.
ಆಂಟಿ ಬಯೋಟಿಕ್ಗಳನ್ನ ಸೇವನೆ ಮಾಡುವವರು ನೀವಾಗಿದ್ದರೆ ಇದೂ ಕೂಡ ಹೊಟ್ಟೆಯಲ್ಲಿ ಗ್ಯಾಸ್ ಉತ್ಪಾದನೆಯಾಗಲು ಒಂದು ಕಾರಣ ಅನ್ನೋದನ್ನ ನೆನಪಿನಲ್ಲಿಡಿ. ಈ ಔಷಧಿಗಳು ಹೊಟ್ಟೆಯಲ್ಲಿ ಜೀರ್ಣಶಕ್ತಿಗೆ ಸಹಾಯ ಮಾಡುವ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನ ಕಡಿಮೆ ಮಾಡೋದ್ರಿಂದ ನಿಮಗೆ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.
ಒತ್ತಡದ ಜೀವನದಿಂದಾಗಿ ಅನೇಕರು ಆಹಾರವನ್ನ ಅಗಿದು ತಿನ್ನುವ ಅಭ್ಯಾಸವನ್ನೇ ಮರೆತು ಬಿಟ್ಟಿದ್ದಾರೆ. ಸರಿಯಾಗಿ ಅಗಿದು ತಿನ್ನದ ಆಹಾರ ಜೀರ್ಣವಾಗಲು ಹೆಚ್ಚಿನ ಸಮಯವನ್ನ ತೆಗೆದುಕೊಳ್ಳುತ್ತೆ. ಇದರಿಂದಾಗಿಯೂ ಗ್ಯಾಸ್ ಸಮಸ್ಯೆ ಉದ್ಭವವಾಗುತ್ತದೆ. ಹೀಗಾಗಿ ಯಾವುದೇ ಸಮಯದಲ್ಲೂ ಆಹಾರ ಸೇವಿಸುವಾಗ ಆರಾಮಾಗಿ ಅಗಿದು ತಿನ್ನುವ ಅಭ್ಯಾಸ ರೂಢಿ ಮಾಡಿಕೊಳ್ಳಿ.