ಬೇಸಿಗೆ ಕಾಲದಲ್ಲಿ ಹೆಚ್ಚು ಬೆವರು ಬರುವುದರಿಂದ ಬೆಡ್ ಶೀಟ್ ಬೇಗನೆ ಗಲೀಜಾಗುತ್ತದೆ. ಇದರಿಂದ ಬೆಡ್ ಶೀಟ್ ನಿಂದ ಕೆಟ್ಟ ವಾಸನೆ ಬರುತ್ತದೆ. ಇದನ್ನು ಸ್ವಚ್ಛಗೊಳಿಸದಿದ್ದರೆ ಚರ್ಮದ ಮೇಲೆ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ಈ ಬೆಡ್ ಶೀಟ್ ಗಳನ್ನು ಸ್ವಚ್ಛಗೊಳಿಸಿ, ಬೆವರಿನ ವಾಸನೆಯನ್ನು ನಿವಾರಿಸಲು ಇದನ್ನು ಹಾಕಿ ವಾಶ್ ಮಾಡಿ.
*ಬಿಳಿ ವಿನೆಗರ್ ಆಮ್ಲೀಯ ಗುಣಗಳನ್ನು ಹೊಂದಿದೆ. ಇದು ದಿಂಬು, ಬೆಡ್ ಶೀಟ್ ಗಳಲ್ಲಿರುವ ಬ್ಯಾಕ್ಟೀರಿಯಗಳನ್ನು ತೊಲಗಿಸಲು ಸಹಕಾರಿ. ಹಾಗಾಗಿ ನೀರಿಗೆ ಬಿಳಿ ವಿನೆಗರ್ ಮಿಕ್ಸ್ ಮಾಡಿ ಬೆಡ್ ಶೀಟ್ ನ್ನು ಆ ನೀರಿನಲ್ಲಿ ನೆನೆಸಿಡಿ. 2 ಗಂಟೆಗಳ ಬಳಿಕ ಅದನ್ನು ಸೋಪ್ ಬಳಸಿ ವಾಶ್ ಮಾಡಿ. ಇದರಿಂದ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.
*ಬೆಡ್ ಶೀಟ್ ಗಳಲ್ಲಿ ಬರುವ ಬೆವರಿನ ವಾಸನೆಯನ್ನು ನಿವಾರಿಸಲು ಬೆಡ್ ಶೀಟ್ ವಾಶ್ ಮಾಡುವಾಗ ಅದರಲ್ಲಿ ಲ್ಯಾವೆಂಡರ್ ಎಸೆನ್ಷಿಯಲ್ ಆಯಿಲ್ ಅನ್ನು 5 ಹನಿಗಳಷ್ಟು ಬೆರೆಸಿ ವಾಶ್ ಮಾಡಿ. ಇದರಿಂದ ಸುವಾಸನೆ ಬರುತ್ತದೆ, ಚೆನ್ನಾಗಿ ನಿದ್ರೆ ಕೂಡ ಮಾಡಬಹುದು.