ಬೇಸಿಗೆ ಕಾಲದಲ್ಲಿ ಬಿಸಿ ಗಾಳಿ, ಧೂಳು, ಕೊಳೆಯಿಂದಾಗಿ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೆಚ್ಚಾಗಿ ಕೂದಲು ಕವಲೊಡೆಯುವ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಹೇರ್ ಪ್ಯಾಕ್ ಬಳಸಿ ನೋಡಿ.
3 ಚಮಚ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ ಅದಕ್ಕೆ 10 -15 ಕರಿಬೇವಿನ ಎಲೆಗಳು, 1 ಆಮ್ಲಾ ಪುಡಿ, ಸೇರಿಸಿ ಕುದಿಸಿ. ಬಳಿಕ ಅದನ್ನು ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ಸೋಸಿ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ.
ಇದನ್ನು ಸಂಜೆ ಸ್ವಲ್ಪ ಉಗುರು ಬೆಚ್ಚಗೆ ಮಾಡಿಕೊಂಡು ಕೂದಲಿಗೆ ಹಚ್ಚಿ ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ಕೂದಲನ್ನು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆಯಾದರೂ ಮಾಡಿ. ಇದು ಕೂದಲು ಕವಲೊಡೆಯುವುದನ್ನು ತಡೆಯುತ್ತದೆ.