ನಿಂಬೆ ಹಣ್ಣು ಆರೋಗ್ಯಕ್ಕೆ ಉತ್ತಮ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ರೋಗಗಳ ವಿರುದ್ಧ ಹೋರಾಡುತ್ತದೆ. ಆದರೆ ಇದರಿಂದ ಕೆಲವು ಅಡ್ಡಪರಿಣಾಮಗಳು ಸಂಭವಿಸುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳಿ.
*ಇದನ್ನು ಚರ್ಮಕ್ಕೆ ಅತಿಯಾಗಿ ಬಳಸಿದರೆ ಚರ್ಮ ಒಣಗುತ್ತದೆ. ಹಾಗೇ ತಲೆಹೊಟ್ಟು ನಿವಾರಿಸಲು ನೆತ್ತಿಗೆ ನೇರವಾಗಿ ನಿಂಬೆ ರಸ ಹಚ್ಚುತ್ತಾರೆ. ಇದರಿಂದ ಕೂದಲು ಡ್ರೈಯಾಗುತ್ತದೆ.
*ಇದು ಆಮ್ಲೀಯ ಗುಣಗಳನ್ನು ಹೊಂದಿರುವ ಕಾರಣ ಇದರ ಹುಳಿ ಹಲ್ಲಿನ ದಂತಕವಚವನ್ನು ಹಾಳು ಮಾಡುತ್ತದೆ.
*ಅತಿಯಾಗಿ ನಿಂಬೆ ಹಣ್ಣುಗಳನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆ ಕಾಡುತ್ತದೆ. ಇದು ಅತಿಸಾರ, ವಾಕರಿಕೆ, ವಾಂತಿ, ಹೊಟ್ಟೆಯ ಸೆಳೆತಕ್ಕೆ ಕಾರಣವಾಗಬಹುದು.
*ನಿಂಬೆ ಅತಿಯಾಗಿ ಸೇವಿಸಿದರೆ ಮೂತ್ರಪಿಂಡ ಹಾಗೂ ಲಿವರ್ ನಂತಹ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.
*ನಿಂಬೆ ರಸದಿಂದ ಮೂಳೆಗಳು ದುರ್ಬಲಗೊಳ್ಳುತ್ತದೆ. ಇದು ಮೂಳೆಗಳ ಸವೆತಕ್ಕೆ ಕಾರಣವಾಗುತ್ತದೆ. ಇದರಿಂದ ಮೂಳೆಗಳಲ್ಲಿ ನೋವು ಕಂಡುಬರುತ್ತದೆ.