ಇಂತಹ ಸಂದರ್ಭಗಳಲ್ಲಿ ಬ್ಲಾಸ್ಟ್ ಆಗಬಹುದು ನಿಮ್ಮ ಮೊಬೈಲ್​ ಬ್ಯಾಟರಿ ಎಚ್ಚರ……!

ಈಗಿನ ಜಮಾನದಲ್ಲಿ ಸ್ಮಾರ್ಟ್​ ಫೋನ್​ ಬಳಕೆ ಮಾಡದೇ ಇರುವವರ ಸಂಖ್ಯೆ ತುಂಬಾನೇ ಕಡಿಮೆ. ಸ್ಮಾರ್ಟ್​ ಫೋನ್​ಗಳಿಂದ ಲಾಭ ಎಷ್ಟಿದೆಯೋ ಇದು ಬ್ಲಾಸ್ಟ್ ಆಯ್ತು ಅಂದರೆ ಅಪಾಯ ಕೂಡ ಅಷ್ಟೇ ಇರುತ್ತೆ. ಹೀಗಾಗಿ ಯಾವ ಸಂದರ್ಭದಲ್ಲಿ ನಿಮ್ಮ ಮೊಬೈಲ್​ ಬ್ಲಾಸ್ಟ್ ಆಗಬಹುದು ಅನ್ನೋದನ್ನ ಅರಿತುಕೊಳ್ಳೋದು ಒಳ್ಳೆಯದು.

ಸ್ಮಾರ್ಟ್​ಫೋನ್​​ ಬ್ಲಾಸ್ಟ್ ಆಗಲು ಎಲ್ಲಕ್ಕಿಂತ ಮುಖ್ಯ ಕಾರಣ ಬ್ಯಾಟರಿ ಸಿಕ್ಕಾಪಟ್ಟೆ ಬಿಸಿ ಆಗೋದ್ರಿಂದ. ಸಾಮಾನ್ಯವಾಗಿ ನಾವು ಮೊಬೈಲ್​ ಚಾರ್ಜಿಂಗ್​ಗೆ ಹಾಕಿದ ಬಳಿಕ ಮರೆತು ಬಿಡುತ್ತೇವೆ. ಚಾರ್ಜ್ ಮಾಡುವ ವೇಳೆ ಮೊಬೈಲ್​ ವಿದ್ಯುತ್​ ಸಂಪರ್ಕದಲ್ಲಿ ಇರುತ್ತೆ. ಇದರಿಂದ ಬ್ಯಾಟರಿ ಹೆಚ್ಚೆಚ್ಚು ಬಿಸಿಯಾಗುತ್ತೆ. ಈ ಸಂದರ್ಭದಲ್ಲಿ ಮೊಬೈಲ್​ ಬ್ಯಾಟರಿ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚು.

ಬೇರೆ ಬೇರೆ ಚಾರ್ಜರ್​ಗಳನ್ನ ಬಳಕೆ ಮಾಡೋದು ಕೂಡ ಮೊಬೈಲ್​ ಬ್ಲಾಸ್ಟ್ ಆಗಲು ಇನ್ನೊಂದು ಮುಖ್ಯ ಕಾರಣವಾಗಿದೆ. ಸಾಮಾನ್ಯವಾಗಿ ನಾವು ಒರಿಜಿನಲ್​ ಚಾರ್ಜರ್​ ಹಾಳಾದ ಬಳಿಕ ಯಾವುದಾದರೂ ಲೋಕಲ್​ ಚಾರ್ಜರ್​ನ್ನು ಖರೀದಿ ಮಾಡಿಬಿಡ್ತೇವೆ. ಇದರಿಂದ ಬ್ಯಾಟರಿ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತೆ.

ಅನೇಕ ಬಾರಿ ಮೊಬೈಲ್​ ಬ್ಯಾಟರಿ ಹಾಳಾಗಿ ಬಿಡುತ್ತೆ. ಇಂತಹ ಸಂದರ್ಭಗಳಲ್ಲಿ ಹಣ ಉಳಿಕೆ ಮಾಡುವ ಸಲುವಾಗಿ ನಾವು ಕಡಿಮೆ ಬೆಲೆಯ ಬ್ಯಾಟರಿಗಳನ್ನ ಅಳವಡಿಸುತ್ತೇವೆ. ಇಂತಹ ಬ್ಯಾಟರಿಗಳು ಚಾರ್ಜ್ ಮಾಡುತ್ತಿದ್ದಂತೆಯೇ ಹಾಳಾಗಿ ಬಿಡುತ್ತೆ. ಇಲ್ಲವೇ ಬ್ಲಾಸ್ಟ್​ ಆಗುತ್ತದೆ.

ಸ್ಮಾರ್ಟ್​ ಫೋನ್​ಗಳಲ್ಲಿ ಅಳವಡಿಸಲಾಗುವ ಬ್ಯಾಟರಿಗಳನ್ನ ಲೀಥಿಯಂನಿಂದ ಮಾಡಲಾಗುತ್ತೆ. ಹೀಗಾಗಿ ಇವು ತುಂಬಾನೇ ಸೂಕ್ಷ್ಮವಾಗಿ ಇರುತ್ತೆ. ಹೀಗಾಗಿ ಮೊಬೈಲ್​ ತುಂಬ ಮೇಲಿನಿಂದ ಕೆಳಕ್ಕೆ ಬಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕೀಟ್​ ಉಂಟಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read