ಇತ್ತೀಚಿನ ದಿನಗಳಲ್ಲಿ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್, ಟಿವಿ ಬಳಕೆ ಹೆಚ್ಚಾಗಿದ್ದರಿಂದ ಕಣ್ಣಿನ ದೃಷ್ಟಿ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಹಾಗಾಗಿ ಅಡುಗೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳಿಂದ ಈ ಕಣ್ಣಿನ ದೃಷ್ಟಿ ಸಮಸ್ಯೆಯನ್ನು ಸುಧಾರಿಸಿಕೊಳ್ಳಿ.
*ಸೊಂಪು : ಇದನ್ನು ಸೇವಿಸುವುದರಿಂದ ಇದರಲ್ಲಿರುವ ಪೋಷಕಾಂಶಗಳು ಕಣ್ಣಿನ ಉರಿಯೂತ, ಕಣ್ಣಿನ ಪೊರೆ ಸಮಸ್ಯೆ ಮತ್ತು ಕಣ್ಣಿನ ಕಾಯಿಲೆಗಳಿಂದ ದೂರವಿರಿಸಬಹುದು.
*ಕೇಸರಿ : ಇದು ದೃಷ್ಟಿಯನ್ನು ಸುಧಾರಿಸುತ್ತದೆ. ವಯಸ್ಸಾದವರು ಕೇಸರಿ ಸೇವನೆ ಮಾಡುವುದರಿಂದ ದೃಷ್ಟಿ ಕ್ಷೀಣಿಸುವ ಸಮಸ್ಯೆಯ ವಿರುದ್ಧ ಹೋರಾಡಬಹುದು.
*ಗ್ರೀನ್ ಟೀ : ದಿನಕ್ಕೆ 1 ಕಪ್ ಗ್ರೀನ್ ಟೀ ಸೇವಿಸುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ. ಹಾಗೇ ಇದು ಕಣ್ಣಿನ ಸುತ್ತಲು ಇರುವಂತಹ ಡಾರ್ಕ್ ಸರ್ಕಲ್ ಅನ್ನು ನಿವಾರಿಸುತ್ತದೆ. ಹಾಗಾಗಿ ಗ್ರೀನ್ ಟೀ ತಯಾರಿಸುವ ಬ್ಯಾಗ್ ಗಳನ್ನು ಕಣ್ಣಿನ ಮೇಲೆ ಸ್ವಲ್ಪ ಹೊತ್ತು ಇಟ್ಟುಕೊಳ್ಳಿ. ಇದರಿಂದ ದೃಷ್ಟಿ ಸಮಸ್ಯೆ ಸುಧಾರಿಸುತ್ತದೆ.