ಮನೆಯನ್ನು ಹಾಗೂ ಯಾವುದೇ ವಸ್ತುಗಳನ್ನು ಸ್ವಚ್ಛಗೊಳಿಸಲು ನಾವು ನೀರನ್ನು ಬಳಸುತ್ತೇವೆ. ಆದರೆ ಕೆಲವೊಂದು ವಸ್ತುಗಳನ್ನು ಸ್ವಚ್ಛಗೊಳಿಸುವಾಗ ನೀರನ್ನು ಬಳಸಬಾರದು. ಇದರಿಂದ ಆ ವಸ್ತುಗಳು ಹಾಳಾಗುತ್ತವೆ. ಹಾಗಾಗಿ ಆ ವಸ್ತುಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
*ಆಭರಣಗಳನ್ನು ಸ್ವಚ್ಛ ಮಾಡುವಾಗ ನೀರನ್ನು ಬಳಸಬೇಡಿ, ಇದರಿಂದ ಅದರ ಹೊಳಪು ಕಡಿಮೆಯಾಗುತ್ತದೆ.
*ಮನೆಯಲ್ಲಿ ಲೆದರ್ ನಿಂದ ತಯಾರಿಸಿದ ವಸ್ತುಗಳಿದ್ದರೆ ಅದನ್ನು ನೀರನ್ನು ಬಳಸಿ ಸ್ವಚ್ಛಗೊಳಿಸಬೇಡಿ. ಇದರಿಂದ ಅವಗಳು ಬೇಗನೆ ಹಾಳಾಗುತ್ತದೆ.
* ಮರದಿಂದ ತಯಾರಿಸಿದ ಪೀಠೋಪಕರಣಗಳನ್ನು ನೀರಿನಿಂದ ಸ್ವಚ್ಛಗೊಳಿಸಬೇಡಿ. ಇದರಿಂದ ಅದು ಬೇಗ ಹಾಳಾಗುತ್ತದೆ. ಹಾಗಾಗಿ ಒಣ ಬಟ್ಟೆಯಿಂದ ಒರೆಸಿ.
*ರೇಷ್ಮೆ ಬಟ್ಟೆಗಳನ್ನು ನೀರಿನಿಂದ ವಾಶ್ ಮಾಡಬೇಡಿ. ಇದರಿಂದ ಬಟ್ಟೆ ಹಾಳಾಗುತ್ತದೆ. ಅದರ ಬದಲು ಡ್ರೈ ಕ್ಲೀನ್ ಗೆ ನೀಡಿ.
*ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ನೀರನ್ನು ಬಳಸಿ ಸ್ವಚ್ಛ ಮಾಡಬೇಡಿ. ಇದರಿಂದ ಈ ವಸ್ತುಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.
*ಸಂಗೀತ ವಾದ್ಯಗಳನ್ನು ಸ್ವಚ್ಛಗೊಳಿಸಲು ನೀರನ್ನು ಬಳಸಬೇಡಿ. ಅದನ್ನು ಕ್ಲೀನ್ ಮಾಡಲು ಬಳಸುವಂತಹ ಕ್ಲೀನರ್ ಗಳನ್ನು ಬಳಸಿ.