ಪ್ರತಿದಿನ ನಿಮಗೆ ದರ್ಶನ ನೀಡುವ ದೇವರೆಂದರೆ ಅದು ಇಡೀ ಜಗತ್ತಿಗೆ ಬೆಳಕು ನೀಡುವ ಸೂರ್ಯ ದೇವ. ಹಾಗಾಗಿ ಭಗವಂತ ಶ್ರೀರಾಮನು ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ನೀರಿಗೆ ಕೆಲವು ಪವಿತ್ರವಾದ ವಸ್ತುಗಳನ್ನು ಸೇರಿಸುತ್ತಿದ್ದರು. ಇದರಿಂದ ಸೂರ್ಯನ ಅನುಗ್ರಹ ದೊರೆಯುತ್ತಿತ್ತು. ಹಾಗಾಗಿ ನೀವು ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ಈ ವಸ್ತುಗಳನ್ನು ಮಿಕ್ಸ್ ಮಾಡಿ ಅರ್ಪಿಸಿ.
ಮದುವೆಯಾದ ಮಹಿಳೆಯರು ತಮ್ಮ ಪತಿಯ ಆಯಸ್ಸು ವೃದ್ಧಿಸಲು ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ಅದರಲ್ಲಿ ಸ್ವಲ್ಪ ಕುಂಕುಮವನ್ನು ಮಿಕ್ಸ್ ಮಾಡಿ ಅರ್ಪಿಸಿ.
ನಿಮ್ಮ ಮನೆಯಲ್ಲಿರುವವರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅದು ವಾಸಿಯಾಗಲು ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ಅದರಲ್ಲಿ ತುಳಸಿಯನ್ನು ಸೇರಿಸಿ ಅರ್ಪಿಸಿ.
ಮದುವೆ ಕಾರ್ಯದಲ್ಲಿ ಅಡಚಣೆಯಾಗುತ್ತಿದ್ದರೆ ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ಅದರಲ್ಲಿ ಸ್ವಲ್ಪ ಅರಿಶಿನ ಮಿಕ್ಸ್ ಮಾಡಿ ಅರ್ಪಿಸಿ.
ಸಂತಾನ ಯೋಗ ಕೂಡಿಬರಲು ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ಅದರಲ್ಲಿ ಸ್ವಲ್ಪ ತುಪ್ಪ ಮತ್ತು ಹಸಿ ಹಾಲನ್ನು ಮಿಕ್ಸ್ ಮಾಡಿ ಅರ್ಪಿಸಬೇಕು.
ನಿಮ್ಮ ಮನೆಯಲ್ಲಿ ಧನ, ಧಾನ್ಯದ ಕೊರತೆಯಾಗುತ್ತಿದ್ದರೆ ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ಅದರಲ್ಲಿ ಸ್ವಲ್ಪ ಅಕ್ಕಿ ಕಾಳನ್ನು ಮಿಕ್ಸ್ ಮಾಡಿ ಅರ್ಪಿಸಿ.