ಕೆಲವರಿಗೆ ಜೀರ್ಣಕ್ರಿಯೆ ಸಮಸ್ಯೆ ಎದುರಾದಾಗ ತಿಂದ ಆಹಾರ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆ ನೋವು, ಸುಡುವ ವೇದನೆ, ವಾಕರಿಕೆ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ನ್ನು ಫಾಲೋ ಮಾಡಿ.
*ಆಹಾರವನ್ನು ಸೇವಿಸಿದ ಬಳಿಕ ಸ್ವಲ್ಪ ಬೆಲ್ಲವನ್ನು ತಿನ್ನಿ. ಇದರಿಂದ ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.
*ಮೊಸರು, ಇಡ್ಲಿಯಂತಹ ಆಹಾರಗಳಲ್ಲಿ ಬ್ಯಾಕ್ಟೀರಿಯಾ ನಾಶಕ ಅಂಶಗಳಿರುವುದರಿಂದ ಇವುಗಳನ್ನು ವಾರದಲ್ಲಿ 2 ಬಾರಿ ಸೇವಿಸಿ.
* ಜೀರಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುವುದರಿಂದ ದಿನಕ್ಕೆ 2 ಬಾರಿ ಜೀರಿಗೆ ನೀರನ್ನು ಕುಡಿಯಿರಿ. ಇದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ.
*ಪ್ರತಿದಿನ ಬೆಚ್ಚಗಿನ ನೀರನ್ನು ದಿನಕ್ಕೆ 8-10 ಗ್ಲಾಸ್ ಸೇವಿಸಿ. ಇದರಿಂದ ಹೊಟ್ಟೆಯ ಭಾರ ಕಡಿಮೆಯಾಗುತ್ತದೆ.