ಹುಣಸೆ ಹಣ್ಣನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ. ಹಾಗೇ ಇದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
100ಗ್ರಾಂ ಹುಣಸೆ ಹಣ್ಣನ್ನು ನೆನೆಸಿ ಹಿಸುಕಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ 100ಗ್ರಾಂ ಬೆಲ್ಲವನ್ನು ನೀರಿನಲ್ಲಿ ಕರಗಿಸಿಕೊಳ್ಳಿ. ಇವೆರಡನ್ನು ಸೇರಿಸಿ ಪೇಸ್ಟ್ ತಯಾರಿಸಿ ಇದನ್ನು ಕೂದಲಿಗೆ ಹಚ್ಚಿ ಕವರ್ ಮಾಡಿ. ಒಣಗಿದ ಬಳಿಕ ವಾಶ್ ಮಾಡಿ. ಇದನ್ನು ವಾರದಲ್ಲಿ ಒಮ್ಮೆ ಮಾಡಿ.
ಹುಣಸೆ ಹಣ್ಣಿನಲ್ಲಿ ಖನಿಜಗಳು, ಪೊಟ್ಯಾಶಿಯಂ, ಮೆಗ್ನಿಶಿಯಂ, ಮತ್ತು ತಾಮ್ರ ಅಧಿಕವಾಗಿದೆ. ಇದರಲ್ಲಿ ಸಾಕಷ್ಟು ಉತ್ಕರ್ಷಣ ನಿರೋಧಕಗಳಿವೆ. ಇದು ತಲೆಹೊಟ್ಟನ್ನು ನಿವಾರಿಸುತ್ತದೆ. ಕೂದಲಿನ ಬೆಳವಣಿಗೆಗ ಸಹಕಾರಿಯಾಗಿದೆ.