ಮುಖ ತೊಳೆದ ಬಳಿಕ ಇದನ್ನು ಸ್ಪ್ರೇ ಮಾಡಿದ್ರೆ ಸಿಗುತ್ತೆ ಮೊಡವೆಗಳಿಂದ ಮುಕ್ತಿ

ಕೆಲವರ ಚರ್ಮ ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಇದರಿಂದ ಮುಖದಲ್ಲಿ ಗುಳ್ಳೆಗಳು, ಮೊಡವೆಗಳು ಮೂಡುತ್ತವೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಮುಖ ತೊಳೆದ ಬಳಿಕ ಇದನ್ನು ಮುಖಕ್ಕೆ ಸ್ಪ್ರೇ ಮಾಡಿ.

*ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದು ತಣ್ಣಗಾದ ಬಳಿಕ ಅದಕ್ಕೆ ಅಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿಗೆ ಹಾಕಿ ಮುಖಕ್ಕೆ 2-3 ಬಾರಿ ಬಳಸಿ. ಬೇವು ನಂಜು ನಿವಾರಕವಾಗಿದ್ದು, ಮೊಡವೆಗಳಿಂದ ಮುಕ್ತಿ ನೀಡುತ್ತದೆ, ಅಲೋವೆರಾ ಮುಖಕ್ಕೆ ಹೊಳಪು ನೀಡುತ್ತದೆ.

*ನೀರಿಗೆ 2 ಚಮಚ ಗ್ರೀನ್ ಟೀ ಸೇರಿಸಿ ಚೆನ್ನಾಗಿ ಕುದಿಸಿ ಅದು ತಣ್ಣಗಾದ ಬಳಿಕ ಅದಕ್ಕೆ 1 ಚಮಚ ನಿಂಬೆರಸ ಮತ್ತು 1 ಚಮಚ ರೋಸ್ ವಾಟರ್ ಸೇರಿಸಿ ಸ್ಪ್ರೇ ಬಾಟಲಿಗೆ ತುಂಬಿಸಿ ದಿನಕ್ಕೆ 2-3 ಬಾರಿ ಮುಖಕ್ಕೆ ಹಚ್ಚಿ. ಗ್ರೀನ್ ಟೀ ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಚರ್ಮವನ್ನು ಮೃದು ಮಾಡುತ್ತದೆ. ನಿಂಬೆ ಕಲೆಗಳನ್ನು ನಿವಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read