ಯಾವುದೇ ರೀತಿಯ ಸೋಂಕಿನಿಂದ ಗಂಟಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ, ಆದರೆ ನಿವಾರಿಸಿಕೊಳ್ಳಲು ಮನೆಯಲ್ಲೇ ಇರುವ ವಸ್ತುಗಳಿಂದ ಹೀಗೆ ನಿವಾರಿಸಿಕೊಳ್ಳಿ.
ಗಂಟಲು ನೋವು ಅಥವಾ ಸೋಂಕಿಗೆ ಅರ್ಧ ಚಿಟಿಕೆ ಕರಿಮೆಣಸಿನ ಪುಡಿಗೆ ಅರ್ಧ ಚಮಚ ಜೇನು ಸೇರಿಸಿ ಬಾಯಿಗೆ ಹಾಕಿಕೊಂಡು ನಿಧಾನಕ್ಕೆ ಗಂಟಲಿಗೆ ಇಳಿಸಿಕೊಳ್ಳಿ. ಇದರಿಂದ ಸೋಂಕು ದೂರವಾಗುವುದು ಮಾತ್ರವಲ್ಲ ಗಂಟಲಿನ ಕಿಚ್ ಕಿಚ್ ಕೂಡಾ ಕಡಿಮೆಯಾಗುತ್ತದೆ.
ಆಪಲ್ ಸೈಡರ್ ವಿನೆಗರ್ ಅನ್ನು ಬಿಸಿನೀರಿನಲ್ಲಿ ಹಾಕಿ ಚೆನ್ನಾಗಿ ಕಲಕಿ. ಬಳಿಕ ಇದನ್ನು ನೇರವಾಗಿ ಗಂಟಲಿಗೆ ಹೊಯ್ದುಕೊಂಡು ಗಾಗಲ್ ಮಾಡಿ. ಇದು ಕೂಡಾ ಸೋಂಕನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಗಂಟಲು ಸೋಂಕಿನ ನಿವಾರಣೆಗೆ ಶುಂಠಿ ಜೀರಿಗೆ ಹಾಕಿ ತಯಾರಿಸಿದ ಕಷಾಯವೂ ಅತ್ಯುತ್ತಮ ಶುಂಠಿಯನ್ನು ಜಜ್ಜಿ ನೀರಿನಲ್ಲಿ ಕುದಿಸಿ. ಆಗ ಜೀರಿಗೆ, ಕಾಳುಮೆಣಸಿನ ಪುಡಿ ಸೇರಿಸಿ. ಕುದಿಸಿ ಅರ್ಧ ಭಾಗಕ್ಕೆ ಇಳಿಯುವಾಗ ಕೆಳಗಿಳಿಸಿ. ತುಸು ಬೆಚ್ಚಗೆ ಇರುವಂತೆಯೇ ಕುಡಿಯಿರಿ.