ಅತಿಯಾದ ಕೆಲಸ, ಒತ್ತಡದಿಂದ ಕೆಲವರು ದಣಿವು, ಆಯಾಸ, ಹೀಗೆ ಹಲವು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಪ್ರತಿದಿನ ರಾತ್ರಿ ಮಲಗುವಾಗ ನಿಮ್ಮ ಪಾದಗಳಿಗೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿ. ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಎಳ್ಳೆಣ್ಣೆಯಿಂದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
* ರಾತ್ರಿ ಮಲಗುವಾಗ ನಿಮ್ಮ ಪಾದಗಳಿಗೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿದರೆ ಕಣ್ಣುಗಳ ದಣಿವು ಕಡಿಮೆಯಾಗುತ್ತದೆ. ಕಣ್ಣಿನ ಕಿರಿಕಿರಿ, ಆಯಾಸ, ಮತ್ತು ಕಣ್ಣು ಭಾರವೆನಿಸುವ ಸಮಸ್ಯೆ ನಿವಾರಣೆಯಾಗುತ್ತದೆ.
*ಅಧ್ಯಯನದ ಪ್ರಕಾರ ನಿಮ್ಮ ಪಾದಗಳಿಗೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿದರೆ ನಿಮ್ಮ ದೇಹವು ಬೆಚ್ಚಗಾಗುತ್ತದೆ. ಅದು ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಇದರಲ್ಲಿರುವ ಕೊಬ್ಬಿನಾಮ್ಲಗಳು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
* ನಿಮ್ಮ ಪಾದಗಳಿಗೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿದರೆ ದಿನದ ಆಯಾಸ ಕಡಿಮೆಯಾಗುತ್ತದೆ. ಇದರಲ್ಲಿರುವ ಅಮೈನೋ ಆಮ್ಲಗಳು ನರಗಳನ್ನು ಪ್ರಚೋದಿಸಿ ದೇಹದ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಎಣ್ಣೆಯಿಂದ ಮಸಾಜ್ ಮಾಡಿದರೆ ನಿಮ್ಮ ಖಿನ್ನತೆ, ಒತ್ತಡ ದೂರವಾಗುತ್ತದೆ.