ಮಗುವಿನ ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಮಗುವಿಗೆ ವಾಂತಿ, ಜ್ವರ ಇತರ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಮಗುವಿಗೆ ನಿರ್ಜಲೀಕರಣ ಸಮಸ್ಯೆ ಇರುವುದನ್ನು ಈ ಸಂಕೇತಗಳ ಮೂಲಕ ತಿಳಿದುಕೊಂಡು ಅದಕ್ಕೆ ಸರಿಯಾದ ಆರೈಕೆ ಮಾಡಿ ಮಗುವಿನ ಆರೋಗ್ಯ ಕಾಪಾಡಿ.
* ಮಕ್ಕಳು ನಿರ್ಜಲೀಕರಣಗೊಂಡಾಗ ಅವರ ಬಾಯಲ್ಲಿ ಲಾಲಾರಸದ ಉತ್ಪತ್ತಿ ಕಡಿಮೆಯಾಗಿ ಬಾಯಿ ಮತ್ತು ತುಟಿ ಒಣಗುತ್ತದೆ.
* ಮಕ್ಕಳು ಸಾಮಾನ್ಯವಾಗಿ ಹೆಚ್ಚು ಮೂತ್ರವಿಸರ್ಜನೆ ಮಾಡುತ್ತಾರೆ. ಹಾಗಾಗಿ ಮಗು ಸರಿಯಾಗಿ ಮೂತ್ರ ವಿಸರ್ಜನೆ ಮಾಡದಿದ್ದಾಗ ಮಗು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದೆ ಎಂದರ್ಥ.
* ಮಕ್ಕಳು ಅತ್ತಾಗ ಜೋರಾಗಿ ಕಣ್ಣೀರು ಸುರಿಯುತ್ತದೆ. ಆದರೆ ಮಗು ನಿರ್ಜಲೀಕರಣ ಸಮಸ್ಯೆಗೆ ಒಳಗಾಗಿದ್ದರೆ ಅತ್ತಾಗ ಕಣ್ಣೀರು ಕಡಿಮೆ ಬರುತ್ತದೆ.
* ಮಗುವಿನ ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಮಗುವಿಗೆ ಶಕ್ತಿ ಕಡಿಮೆಯಾಗಿ ಮಗುವಿನ ಚಟುವಟಿಕೆಗಳು ಕಡಿಮೆಯಾಗುತ್ತದೆ.
*ಮಗುವಿಗೆ ನಿರ್ಜಲೀಕರಣವಾದಾಗ ಮಗುವಿನ ಮಲ ಗಟ್ಟಿಯಾಗುತ್ತದೆ. ಇದರಿಂದ ಮಗುವಿಗೆ ಮಲ ವಿಸರ್ಜನೆ ಕಷ್ಟವಾಗುತ್ತದೆ.