ಜನರು ಸದಾ ಕಂಪ್ಯೂಟರ್, ಟಿವಿ, ಮೊಬೈಲ್ ಬಳಸುತ್ತಿರುತ್ತಾರೆ. ಅನೇಕ ಗಂಟೆಗಳ ಕಾಲ ಕಂಪ್ಯೂಟರ್ ನೋಡುವುದು ಅಥವಾ ಮೊಬೈಲ್ ಬಳಕೆಯಿಂದ ಕಣ್ಣು ಆಯಾಸಗೊಳ್ಳುತ್ತದೆ. ಕಣ್ಣಿನ ಉರಿ ಕಾಣಿಸಿಕೊಳ್ಳುತ್ತದೆ. ರಾತ್ರಿಯಾದಂತೆ ಕಣ್ಣು ನೋವು ಕಾಣಿಸಿಕೊಳ್ಳುತ್ತದೆ. ಕಣ್ಣಿನ ಸಮಸ್ಯೆಗೆ ರೋಸ್ ವಾಟರ್ ಒಳ್ಳೆ ಮದ್ದು.
ಆಯುರ್ವೇದದಲ್ಲಿ ಅನೇಕ ಔಷಧಿಗಳಿಗೆ ರೋಸ್ ವಾಟರ್ ಬಳಕೆ ಮಾಡುತ್ತಾರೆ. ನೈಸರ್ಗಿಕ ಕ್ಲೆನ್ಸರ್ ರೂಪದಲ್ಲಿ ಕೆಲಸ ಮಾಡುತ್ತದೆ. ಇದು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ರೋಸ್ ವಾಟರ್ ನಿಮ್ಮ ಹೈಪರ್ ಆಕ್ಟಿವ್ ಮೆದುಗಳನ್ನು ಶಾಂತಗೊಳಿಸುತ್ತದೆ. ಸರಿಯಾಗಿ ನಿದ್ರೆ ಮಾಡಲು ನೆರವಾಗುತ್ತದೆ. ಖಿನ್ನತೆಯನ್ನು ದೂರ ಮಾಡುತ್ತದೆ. ಕಣ್ಣಿನ ಮೇಲೆ ರೋಸ್ ವಾಟರ್ ಹಚ್ಚಬೇಕು. ಇದು ಕಣ್ಣಿನ ದಣಿವನ್ನು ಕಡಿಮೆ ಮಾಡುತ್ತದೆ. ಆಯಾಸವನ್ನು ಕಡಿಮೆ ಮಾಡಲು ಇದು ಒಳ್ಳೆ ಮಾರ್ಗ.
ರೋಸ್ ವಾಟರ್ ನೋವು ನಿವಾರಕ ಔಷಧಿಯಲ್ಲ. ಆದ್ರೆ ನೋವು ನಿವಾರಕ ಗುಣ ಹೊಂದಿದೆ. ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಕಣ್ಣಿನ ಒತ್ತಡ ಕಡಿಮೆ ಮಾಡಲು ನೆರವಾಗುತ್ತದೆ.
ಹತ್ತಿಗೆ ರೋಸ್ ವಾಟರ್ ಹಾಕಿ ನಿಮ್ಮ ಕಣ್ಣಿನ ಮೇಲೆ ಇಡಿ. 15 ನಿಮಿಷ ಹೀಗೆ ಇಟ್ಟುಕೊಳ್ಳುವುದ್ರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಕಣ್ಣು ತಂಪಾಗಿ ಆರಾಮವೆನಿಸುತ್ತದೆ. ರಾತ್ರಿ ಮಲಗುವ ಮುನ್ನ ಕಣ್ಣಿನ ಮೇಲೆ ರೋಸ್ ವಾಟರ್ ಸವರಿ ಮಲಗುವುದ್ರಿಂದ ಒಳ್ಳೆಯ ನಿದ್ರೆ ಬರುತ್ತದೆ.
ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಇದ್ದರೆ ಅಲ್ಲಿ ರೋಸ್ ವಾಟರ್ ಹಚ್ಚಿ. ಪ್ರತಿ ದಿನ ಕಣ್ಣಿನ ಕೆಳಗೆ ರೋಸ್ ವಾರ್ಟರ್ ಹಚ್ಚುವುದ್ರಿಂದ ಕಪ್ಪು ಕಲೆ ಮಾಯವಾಗುತ್ತದೆ.