ಗರ್ಭ ಧರಿಸಿದ ಮಹಿಳೆಯರಿಗೆ ಎಲ್ಲಾ ರೀತಿಯ ಪೋಷಕಾಂಶ-ಜೀವಸತ್ವದ ಅವಶ್ಯಕತೆ ಇರುತ್ತದೆ.
ಆದರೆ ವಿಟಾಮಿನ್ ಡಿ ಹಾಗೂ ಕ್ಯಾಲ್ಶಿಯಂ ಮೂಳೆಯನ್ನ ಬಲ ಮಾಡೋದರ ಜೊತೆಗೆ ಮಗುವಿನ ಬೆಳವಣಿಗೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತೆ. ಹೀಗಾಗಿ ಈ ಗರ್ಭವತಿಯಾದ ಸಂದರ್ಭದಲ್ಲಿ ನೀವು ಸೇವಿಸಲೇಬೇಕಾದ ಕೆಲ ಆಹಾರ ಪದಾರ್ಥಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕಿತ್ತಳೆ ಹಣ್ಣು : ಇದು ಅಗಾಧ ಪ್ರಮಾಣದ ಕ್ಯಾಲ್ಶಿಯಂನ್ನು ದೇಹಕ್ಕೆ ಒದಗಿಸುತ್ತದೆ. ಅಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಒಂದು ಕಿತ್ತಳೆ ಹಣ್ಣು ಸೇವನೆಯಿಂದ 50 ಮಿಲಿಗ್ರಾಂ ಕ್ಯಾಲ್ಶಿಯಂ ದೊರಕುತ್ತದೆ.
ಬಸಳೆ ಹಾಗೂ ಖರ್ಜೂರ : ಬಸಳೆಯಲ್ಲಿ 250 ಮಿಲಿಗ್ರಾಂ ಕ್ಯಾಲ್ಶಿಯಂ ಜೊತೆಯಲ್ಲಿ ಕಬ್ಬಿಣಾಂಶ ಕೂಡ ಅಗಾಧ ಪ್ರಮಾಣದಲ್ಲಿದೆ. ಇತ್ತ ಖರ್ಜೂರ ಕೂಡ ಮಗುವಿನ ಹಲ್ಲು ಹಾಗೂ ಮೂಳೆಗಳನ್ನ ಬಲಶಾಲಿ ಮಾಡುವಲ್ಲಿ ಸಹಕಾರಿ.
ಬಾದಾಮಿ ಹಾಗೂ ತೊಗರಿಬೇಳೆ : ಬಾದಾಮಿ ಕೂಡ ಕ್ಯಾಲ್ಶಿಯಂ ಕೊರತೆ ವಿರುದ್ಧ ಹೋರಾಡಲು ತುಂಬಾನೇ ಉಪಯುಕ್ತ. 100 ಗ್ರಾಂ ಬಾದಾಮಿಯಲ್ಲಿ 264 ಮಿಲಿಗ್ರಾಂ ಕ್ಯಾಲ್ಶಿಯಂ ಅಡಗಿರುತ್ತದೆ. ಅಲ್ಲದೇ ಮೆದುಳಿನ ಬುದ್ಧಿಮತ್ತೆಯನ್ನ ಹೆಚ್ಚಿಸುವಲ್ಲಿಯೂ ಬಾದಾಮಿ ಪ್ರಮುಖ ಪಾತ್ರ ವಹಿಸಲಿದೆ. ಇತ್ತ ತೊಗರಿ ಬೇಳೆ ಕೂಡ 19 ಮಿಲಿಗ್ರಾಂ ಕ್ಯಾಲ್ಶಿಯಂ ಅನ್ನು ಹೊಂದಿರುತ್ತದೆ.
ಇನ್ನುಳಿದಂತೆ ಹಾಲು ಹಾಗೂ ಹಾಲಿನಿಂದ ತಯಾರಾದ ಎಲ್ಲಾ ಪದಾರ್ಥ, ಬ್ರೊಕೋಲಿ, ಸೋಯಾಬೀನ್ಗಳು ಕೂಡ ಕ್ಯಾಲ್ಶಿಯಂ ಕೊರತೆ ವಿರುದ್ಧ ಹೋರಾಡಬಲ್ಲವು.