ಒತ್ತಡ, ಆತಂಕ ಹೆಚ್ಚಾಗ್ತಿದ್ದಂತೆ ಗಂಟಲು ಕಟ್ಟಿಕೊಳ್ಳೋದು ಏಕೆ….?

ಚಿಂತೆ, ಒತ್ತಡದಿಂದ ನೀವು ಬಳಲುತ್ತಿದ್ದರೆ ನಿಮ್ಮ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಗಂಟಲು ಬಿಗಿದಂತೆ ಅನುಭವವಾಗುತ್ತದೆ. ಗಂಟಲು ಕಟ್ಟಿದಂತಾಗಿ ನುಂಗಲು ಸಮಸ್ಯೆಯಾಗುತ್ತದೆ. ಗಂಟಲು ನೋವು  ದೈಹಿಕ ಲಕ್ಷಣಗಳಲ್ಲಿ ಒಂದಾಗಿದೆ. ಆತಂಕದಲ್ಲಿದ್ದಾಗ ಗಂಟಲು ಬಿಗಿದಂತೆ ಅನುಭವವಾಗಲು ಅನೇಕ ಕಾರಣವಿದೆ.

ಒತ್ತಡಕ್ಕೊಳಗಾದಾಗ ಅಥವಾ ಆತಂಕಕ್ಕೊಳಗಾದಾಗ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಬಿಡುಗಡೆಯಾಗುತ್ತದೆ. ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚಾಗುವ ಜೊತೆಗೆ  ಈ ಹಾರ್ಮೋನುಗಳ ಬಿಡುಗಡೆಯು ವಿವಿಧ ರೀತಿಯ ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು.

ಒತ್ತಡದಲ್ಲಿದ್ದಾಗ ಹೆಚ್ಚು ಅಥವಾ ಕಡಿಮೆ ಉಸಿರಾಟದ ತೊಂದರೆಗಳ ಕಾಡುತ್ತವೆ. ಬಾಯಿಯಿಂದ ಉಸಿರಾಡಬೇಕಾಗುತ್ತದೆ. ಆತಂಕದ ಕೆಮ್ಮು ಕಾಣಿಸಿಕೊಳ್ಳುವ ಜೊತೆಗೆ ಸ್ನಾಯು ಒತ್ತಡ ಕಾಡುತ್ತದೆ. ಇದ್ರಿಂದ ಗಂಟಲು ತುರಿಕೆಯ ಅನುಭವವಾಗುತ್ತದೆ. ಗಂಟಲು ಒಣಗುತ್ತದೆ.

ಒತ್ತಡದ ವೇಳೆ ಬಿಡುಗಡೆಯಾಗುವ ಹಾರ್ಮೋನ್ ಗಳು ಸ್ನಾಯು ಸೆಳೆತಕ್ಕೆ ಕಾರಣವಾಗುತ್ತದೆ. ಧ್ವನಿ ಪೆಟ್ಟಿಗೆಯನ್ನು ನಿಯಂತ್ರಿಸುವ ಸ್ನಾಯುಗಳು ಒತ್ತಡಕ್ಕೆ ಒಳಗಾಗಿ ಮಾತನಾಡಲು ಸಮಸ್ಯೆಯಾಗುತ್ತದೆ.

ಒತ್ತಡ ಕಡಮೆಯಾದಂತೆ ಇವು ಕಡಿಮೆಯಾಗುತ್ತವೆ. ಆತಂಕ ಹೆಚ್ಚಾಗ್ತಿದ್ದಂತೆ ಆರಾಮವಾಗಿ ಉಸಿರಾಡಿ. ಒಂದು ಸುದೀರ್ಘ ನಡಿಗೆ ಆತಂಕ ಕಡಿಮೆ ಮಾಡಲು ಅತ್ಯುತ್ತಮ ಉಪಾಯ. ಉತ್ತಮ ಸಂಗೀತವನ್ನು ಆಲಿಸಿ. ನಿಮ್ಮ ನೆಚ್ಚಿನ ಕೆಲಸವನ್ನು ಮಾಡಿ. ಸ್ನೇಹಿತರೊಂದಿಗೆ ಮಾತನಾಡಿ. ದಿನವೂ ವ್ಯಾಯಾಮ ಮಾಡಿ. ಆರೋಗ್ಯಕರ ಆಹಾರ ಸೇವನೆ ಮಾಡಿ.  ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯನ್ನು ತಪ್ಪಿಸಿ. ಉತ್ತಮ ನಿದ್ರೆ ಮಾಡಿ. ಧ್ಯಾನ ಮಾಡಿ. ಇದ್ರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಸಹಜ ಸ್ಥಿತಿಗೆ ಬರುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read