ಸುಮ್ಮನೆ ಕುಳಿತಿರುವಾಗ ನಿಮಗೆ ಕಾಲನ್ನ ಅಲ್ಲಾಡಿಸುವ ಅಭ್ಯಾಸ ಇದೆ ಅಂದರೆ ಹುಷಾರಾಗಿರಿ. ಯಾಕಂದ್ರೆ ಇದು ಆತಂಕದ, ಕಳವಳವನ್ನ ಉಂಟು ಮಾಡುವ ಸಿಂಡ್ರೋಮ್ ಆಗಿದೆ.
ಈ ಅಭ್ಯಾಸ ಶುರುವಾಗೋಕೆ ಮುಖ್ಯ ಕಾರಣ ದೇಹದಲ್ಲಿ ಕಬ್ಬಿಣಾಂಶದ ಕೊರತೆ.
ಈ ಸಮಸ್ಯೆ 10 ಪ್ರತಿಶತ ಜನರಲ್ಲಿ ಕಂಡು ಬರುತ್ತೆ. ಅಲ್ಲದೇ ಬಹುತೇಕ 35 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಕಾಣೋದು ತುಂಬಾನೇ ಹೆಚ್ಚು.
ಏನಿದು ಸಮಸ್ಯೆ…?
ಇದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಹಾರ್ಮೋನ್ನ ಅಸಮತೋಲದಿಂದಾಗಿ ವ್ಯಕ್ತಿಗೆ ಪದೇ ಪದೇ ಕಾಲನ್ನ ಅಲುಗಾಡಿಸಬೇಕು ಎಂದೆನಿಸುತ್ತೆ. ಈ ಸಮಸ್ಯೆಯನ್ನ ನಿದ್ರಾಹೀನತೆಯ ಸಮಸ್ಯೆಗೂ ಸೇರಿಸಬಹುದು. ಯಾಕಂದ್ರ ಯಾವ ವ್ಯಕ್ತಿಯು ಸರಿಯಾಗಿ ನಿದ್ದೆ ಮಾಡೋದಿಲ್ವೋ ಅಂತವರಲ್ಲಿ ಈ ಅಭ್ಯಾಸ ಕಾಣಿಸೋದು ಜಾಸ್ತಿ.
ಈ ಸಮಸ್ಯೆಯನ್ನ ಹೋಗಲಾಡಿಸೋಕೆ ನೀವು ಕಬ್ಬಿಣಾಂಶದ ಮಾತ್ರೆಗಳನ್ನ ಸೇವನೆ ಮಾಡಬಹುದು. ಅಲ್ಲದೇ ನಿದ್ದೆ ಸರಿಯಾಗೋಕೆ ಮಾತ್ರೆ ಸೇವಿಸಿದ್ರೂ ಈ ಸಮಸ್ಯೆ ಕಡಿಮೆಯಾಗಲಿದೆ.
ಇದರ ಜೊತೆಯಲ್ಲಿ ಕಬ್ಬಿಣಾಂಶ ಅಗಾಧ ಪ್ರಮಾಣದಲ್ಲಿರುವ ಬಾಳೆಹಣ್ಣು, ಬಸಳೆ ಸೊಪ್ಪು, ಪಾಲಾಕ್ ಸೊಪ್ಪು, ಬೀಟ್ರೂಟ್ಗಳನ್ನ ಹೆಚ್ಚಾಗಿ ಸೇವಿಸಿ. ರಾತ್ರಿ ಹೊತ್ತು ಚಹ ಹಾಗೂ ಕಾಫಿ ಕುಡಿಯುವ ಅಭ್ಯಾಸ ಬಿಟ್ಟು ಬಿಡಿ. ಮಲಗುವ ವೇಳೆಯಲ್ಲಿ ಟಿವಿ, ಮೊಬೈಲ್ ನೋಡುವ ಅಭ್ಯಾಸವನ್ನೂ ಇಟ್ಟುಕೊಳ್ಳಬೇಡಿ. ಧೂಮಪಾನ ಹಾಗೂ ಮದ್ಯಪಾನವನ್ನೂ ತ್ಯಜಿಸಿ.