ಬಾಯಿಯಲ್ಲಿ ಅಲ್ಸರ್ ಆಗೋದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದು ಕೇಳೋಕೆ ಬಹಳ ಸಣ್ಣ ವಿಚಾರ ಅಂತಾ ಅನಿಸಿದ್ರೂ ಸಹ ಅದರ ಕಷ್ಟ ನೋವು ಅನುಭವಿಸಿದವರಿಗೇ ಗೊತ್ತು. ಮೌತ್ ಅಲ್ಸರ್ ಉಂಟಾಗೋಕೆ ಹಲವಾರು ಕಾರಣಗಳಿದೆ. ಹೊಟ್ಟೆಯಲ್ಲಿ ಉಷ್ಣತೆ ಹೆಚ್ಚಾದಾಗ, ಹಾರ್ಮೋನ್ನಲ್ಲಿ ಏರುಪೇರಾದಾಗ ಹೀಗೆ ಅನೇಕ ಕಾರಣಗಳಿಂದ ಬಾಯಿಯಲ್ಲಿ ಹುಣ್ಣು ಉಂಟಾಗುತ್ತೆ. ಈ ಸಮಸ್ಯೆಗೆ ಮನೆ ಮದ್ದು ಪರಿಹಾರ ನೀಡಬಲ್ಲದು.
ಜೇನುತುಪ್ಪ : ಜೇನುತುಪ್ಪದಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಅಂಶ ನಿಮಗೆ ಬಾಯಿ ಹುಣ್ಣು ಸಮಸ್ಯೆಯಿಂದ ಮುಕ್ತಿ ನೀಡುತ್ತೆ, ಬಾಯಿ ಹುಣ್ಣಿನಿಂದ ಬೇಗ ಗುಣಮುಖರಾಗಲು ನೀವು ಬಯಸಿದ್ದರೆ ಜೇನುತುಪ್ಪವನ್ನ ಹುಣ್ಣಾದ ಜಾಗದಲ್ಲಿ ಹಚ್ಚಿಕೊಳ್ಳಿ.
ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಆದರೆ ಬಹಳ ಜನಕ್ಕೆ ಇದು ಬಾಯಿ ಹುಣ್ಣು ಸಮಸ್ಯೆಗೂ ಪರಿಹಾರ ನೀಡುತ್ತೆ ಅನ್ನೋದು ಗೊತ್ತಿರಲಿಕ್ಕಿಲ್ಲ. ರಾತ್ರಿ ಮಲಗುವ ಮುನ್ನ ಹುಣ್ಣಾದ ಜಾಗಕ್ಕೆ ಹಚ್ಚಿಕ್ಕೊಂಡು ಮಲಗಿ, ಬೆಳಗ್ಗೆ ಎಳೋದ್ರೊಳಗಾಗಿ ನಿಮ್ಮ ಸಮಸ್ಯೆ ಪರಿಹಾರವಾಗದಿದ್ರೆ ಹೇಳಿ.
ಉಪ್ಪು ನೀರು : ಒಂದು ಚಮಚ ಉಪ್ಪಿಗೆ ಬೆಚ್ಚನೆಯ ನೀರನ್ನ ಸೇರಿಸಿ ಬಾಯಿ ಮುಕ್ಕಳಿಸಿ. ದಿನಕ್ಕೆ ಮೂರು ಬಾರಿ ಈ ರೀತಿ ಮಾಡಿ.
ಇನ್ನುಳಿದಂತೆ ಟೂತ್ಪೇಸ್ಟ್, ಲವಂಗ ಕೂಡ ಬಾಯಿ ಹುಣ್ಣು ಸಮಸ್ಯೆಗೆ ರಾಮಬಾಣವಾಗಿದೆ.