ಮೈದಾ ಹಿಟ್ಟು 1 1/2 ಕಪ್, ಯೀಸ್ಟ್ 1 1/2 ಚಮಚ, ಸಕ್ಕರೆ 1 ಚಮಚ, ಅಡುಗೆ ಎಣ್ಣೆ, ಚೀಸ್, ಪಿಜ್ಜಾ ಮಸಾಲೆ, ದೊಡ್ಡ ಮೆಣಸು (ಹಳದಿ & ಕೆಂಪು), ಈರುಳ್ಳಿ 1, ಕರಿ ಓಲಿವ್ಸ್, ಸ್ವೀಟ್ ಕಾರ್ನ್ 1/2 ಕಪ್, ಕೆಂಪು ಮೆಣಸಿನ ಚೂರು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟನ್ನ ತೆಗೆದುಕೊಳ್ಳಿ. ಇದಕ್ಕೆ ಇನ್ಸ್ಟಂಟ್ ಈಸ್ಟ್ನ್ನು ಸೇರಿಸಿ, ಬಳಿಕ ಸಕ್ಕರೆ, ಉಪ್ಪು ಹಾಕಿ ಕಲಿಸಿಕೊಳ್ಳಿ. ಇದಾದ ಬಳಿಕ ಈ ಮಿಶ್ರಣಕ್ಕೆ ಎಣ್ಣೆ ಹಾಗೂ ಬಿಸಿ ನೀರನ್ನ ಹಂತ ಹಂತವಾಗಿ ಮಿಕ್ಸ್ ಮಾಡುತ್ತಾ ನಾದಿಕೊಳ್ಳಿ. ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಬರ್ತಿದ್ದಂತೆಯೇ ಅದರ ಮೇಲೆ ಎಣ್ಣೆಯನ್ನ ಸವರಿ ಪಾತ್ರೆಯನ್ನ ತೆಳುವಾದ ಬಟ್ಟೆಯಿಂದ ಮುಚ್ಚಿಡಿ. 1 ರಿಂದ 2 ಗಂಟೆಗಳ ಬಳಿಕ ಕಲಸಿದ ಹಿಟ್ಟು ಎರಡಷ್ಟಾಗುತ್ತೆ. ಇದನ್ನ ಮತ್ತೊಮ್ಮೆ ನಾದಿಕೊಳ್ಳಿ.
ನಾದಿಕೊಂಡ ಈ ಹಿಟ್ಟನ್ನ ರೊಟ್ಟಿಯ ರೀತಿ ಮಾಡಿಕೊಳ್ಳಿ. ಈ ರೊಟ್ಟಿಯನ್ನ ಪಿಜ್ಜಾ ಪ್ಯಾನ್ ಮೇಲೆ ಹಾಕಿ ಚೆನ್ನಾಗಿ ತಟ್ಟಿ. ಆಮೇಲೆ ಪೋರ್ಕ್ ಬಳಸಿ ಈ ಪಿಜ್ಜಾ ಬೇಸ್ಮೇಲೆ ಚಿಕ್ಕ ಚಿಕ್ಕ ರಂಧ್ರಗಳನ್ನ ಮಾಡಿ. ಇದಕ್ಕೆ ಪಿಜ್ಜಾ ಮಸಲಾ ಸವರಿ ಬಳಿಕ ಚೀಸ್, ಕಟ್ ಮಾಡಿದ ಈರುಳ್ಳಿ, ದೊಡ್ಡ ಮೆಣಸು, ಕರಿ ಓಲಿವ್ಸ್, ಸ್ವೀಟ್ ಕಾರ್ನ್, ಕೆಂಪು ಮೆಣಸಿನ ಚೂರು, ಬೇಕಾದಲ್ಲಿ ಮತ್ತೊಂದು ಬಾರಿ ಚೀಸ್, ಟೊಮ್ಯಾಟೋ ಎಲ್ಲವನ್ನ ಹಾಕಿ ಪಿಜ್ಜಾ ರೀತಿಯಲ್ಲಿ ಅಲಂಕರಿಸಿ. ಬಳಿಕ ಇದನ್ನ ಓವನ್ನಲ್ಲಿ ಕನೆಕ್ಷನ್ ಮೋಡ್ 450 ವ್ಯಾಟ್ನಲ್ಲಿ 10 ರಿಂದ15 ನಿಮಿಷ ಬೇಯಿಸಿದ್ರೆ ರುಚಿಕರ ಪಿಜ್ಜಾ ಸವಿಯಲು ಸಿದ್ಧ