alex Certify ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಣೆಗೆ ಈ ಯೋಗ ಬೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಣೆಗೆ ಈ ಯೋಗ ಬೆಸ್ಟ್

ಕೆಲವು ಮಹಿಳೆಯರು ಹಾರ್ಮೋನ್ ಅಸಮತೋಲನದಿಂದ, ಬದಲಾದ ಜೀವನಶೈಲಿಯಿಂದ ಅನಿಯಮಿತವಾದ ಮುಟ್ಟಿನ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಹಲವು ಸಮಸ್ಯೆಗಳ ಕಾಡುತ್ತದೆ. ಇದರಿಂದ ಮಹಿಳೆಯರ ಮನಸ್ಸು ಒತ್ತಡ, ಚಿಂತೆಗೆ ಒಳಗಾಗುತ್ತದೆ. ಹಾಗಾಗಿ ಈ ಮುಟ್ಟಿನ ಸಮಸ್ಯೆಯನ್ನು ನಿವಾರಿಸಲು ಔಷಧಿಗಳನ್ನು ಸೇವಿಸುವ ಬದಲು ಈ ಯೋಗಗಳನ್ನು ಅಭ್ಯಾಸ ಮಾಡಿ.

*ಬಡ್ಡಾ ಕೊನಾಸನ (ಚಿಟ್ಟೆ ಭಂಗಿ) : ಋತುಚಕ್ರದ ಸಮಸ್ಯೆಗೆ ಇದು ಅತ್ಯುತ್ತಮ ಆಸನವಾಗಿದೆ. ಇದು ಆರೋಗ್ಯಕರ ಮುಟ್ಟಿನ ಚಕ್ರವನ್ನು ಅನುಭವಿಸಬಹುದು. ನೀವು ಕುಳಿತುಕೊಂಡು ನಿಮ್ಮ ಪಾದಗಳನ್ನು ಬಿಗಿಯಾಗಿ ಹಿಡಿದುಕೊಳ್ಳಿ, ನಿಮ್ಮ ಪಾದಗಳು ಚಲಿಸದೆ ನಿಮ್ಮ ತೊಡೆಗಳನ್ನು ಮಾತ್ರ ಮೇಲಕ್ಕೆ ಮತ್ತು ಕೆಳಕ್ಕೆ ಬೀಸಲು ಪ್ರಾರಂಭಿಸಿ. ಇದನ್ನು ಒಂದೆರಡು ನಿಮಿಷ ಮಾಡಿ.

*ಉಷ್ಟ್ರಾಸನ (ಒಂಟೆ ಭಂಗಿ) : ಇದು ಕಿಬ್ಬೊಟ್ಟೆಯ ಪ್ರದೇಶದಲ್ಲಿ ಹಿಗ್ಗಲು ಕಾರಣವಾಗುತ್ತದೆ. ಇದು ಗರ್ಭಕೋಶದ ಸ್ನಾಯುಗಳನ್ನು ಸಂಕೋಚಿಸುತ್ತದೆ. ಮತ್ತು ಮುಟ್ಟಿನ ಸೆಳೆತವನ್ನು ಕಡಿಮೆ ಮಾಡುತ್ತದೆ. ನೀವು ನೆಲದ ಮೇಲೆ ಮಂಡಿಯೂರಿ ಬಳಿಕ ನಿಮ್ಮ ಬೆನ್ನನ್ನು ಹಿಂದಕ್ಕೆ ಭಾಗಿಸಿ ನಿಮ್ಮ ಕೈಗಳಿಂದ ನಿಮ್ಮ ಕಾಲುಗಳನ್ನು ಹಿಡಿದುಕೊಳ್ಳಿ. 30 ಸೆಕೆಂಡುಗಳ ಕಾಲ ಹೀಗೆ ಮಾಡಿ.

*ಧನುರಾಸನ (ಬಿಲ್ಲುಭಂಗಿ ) : ಇದು ಮುಟ್ಟಿನ ರೋಗವನ್ನು ನಿವಾರಿಸುವುದಲ್ಲದೇ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ನಿಮ್ಮ ಹೊಟ್ಟೆಯ ಮೇಲೆ ನೆಲದ ಮೇಲೆ ಮಲಗಿ ಕಾಲುಗಳನ್ನು ಮೇಲಕೆತ್ತಿ ನಿಮ್ಮ ಕೈಗಳಿಂದ ಹಿಡಿದುಕೊಳ್ಳಿ. ನಿಮ್ಮ ತೂಕವನ್ನು ಹೊಟ್ಟೆಯ ಮೇಲೆ ಹಾಕಿ . 30 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಇರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...