ಕೈಕಾಲಿನ ಸೌಂದರ್ಯವನ್ನು ಹೆಚ್ಚಿಸಲು ಚರ್ಮದ ಮೇಲಿನ ಅನಗತ್ಯವಾದ ಕೂದಲನ್ನು ತೆಗೆಯುತ್ತಾರೆ. ಆದರೆ ಸೂಕ್ಷ್ಮ ಚರ್ಮ ಹೊಂದಿರುವವರ ಚರ್ಮ, ಕೆಂಪಾಗಿ, ಅಲರ್ಜಿಯಾಗಿ ಊದಿಕೊಳ್ಳುತ್ತದೆ. ಇದು ನೋವಿನಿಂದ ಕೂಡಿರುತ್ತದೆ. ಈ ಚರ್ಮ ಊದಿಕೊಳ್ಳುವುದನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.
*ಅಲೋವೆರಾ ಎಲೆಯಿಂದ ಜೆಲ್ ನ್ನು ತೆಗೆದು ಊದಿಕೊಂಡ ಚರ್ಮಕ್ಕೆ ಹಚ್ಚಿ. ಇದು ತಂಪಾದ ಭಾವನೆಯನ್ನು ಮೂಡಿಸುತ್ತದೆ ಮತ್ತು ಸುಡುವ ವೇದನೆಯನ್ನು ಕಡಿಮೆ ಮಾಡುತ್ತದೆ. ಚರ್ಮದ ಅಲರ್ಜಿಯನ್ನು ನಿವಾರಿಸುತ್ತದೆ.
*ಟೀ ಟ್ರೀ ಆಯಿಲ್ ನಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಸ್ ಮತ್ತು ಆಂಟಿಫಂಗಲ್ ಗುಣಗಳಿವೆ. ಈ ಎಣ್ಣೆಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ಇದನ್ನು ಊದಿಕೊಂಡ ಚರ್ಮಕ್ಕೆ ಹಚ್ಚಿ 2 ನಿಮಿಷ ಮಸಾಜ್ ಮಾಡಿ. ಇದನ್ನು ರಾತ್ರಿಯ ವೇಳೆ ಅನ್ವಯಿಸಿ.
*ಆಪಲ್ ಸೈಡರ್ ವಿನೆಗರ್ ನಂಜು ನಿವಾರಕ ಗುಣಗಳನ್ನು ಹೊಂದಿದೆ. ಹಾಗಾಗಿ ಅದನ್ನು ನೀರಿಗೆ ಮಿಕ್ಸ್ ಮಾಡಿ ಹತ್ತಿ ಉಂಡೆಯ ಸಹಾಯದಿಂದ ಪೀಡಿತ ಪ್ರದೇಶಕ್ಕೆ ಹಚ್ಚಿ. ಇದನ್ನು ದಿನಕ್ಕೆ 2 ಬಾರಿ ಮಾಡಿ.
*ತೆಂಗಿನೆಣ್ಣೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದು ಆ್ಯಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ. ಇದನ್ನು ಪೀಡಿತ ಪ್ರದೇಶಕ್ಕೆ ಹಚ್ಚಿ ಒಣಗಲು ಬಿಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ.