ಊಟಕ್ಕೂ ಮೊದಲು ಏನಾದರೂ ಸ್ಟಾಟರ್ಸ್ ಇದ್ದರೆ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಿದ್ದೀರಾ…? ಇಲ್ಲಿದೆ ನೋಡಿ ಥಟ್ಟಂತ ರೆಡಿಯಾಗುವ ಗ್ರಿಲ್ಡ್ ಮಶ್ರೂಮ್.
2 ಟೀ ಸ್ಪೂನ್-ಎಣ್ಣೆ, 2 ಕಪ್- ಮಶ್ರೂಮ್, ಉಪ್ಪು, ಕಾಳುಮೆಣಸಿನ ಪುಡಿ.
ಗ್ರಿಲ್ ಪ್ಯಾನ್ ಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಮಶ್ರೂಮ್ ಹಾಕಿ ಅದಕ್ಕೆ ಉಪ್ಪು ಸೇರಿಸಿ. 3 ನಿಮಿಷಗಳ ಕಾಲ ಹದ ಉರಿಯಲ್ಲಿ ಫ್ರೈ ಮಾಡಿ. ಗ್ಯಾಸ್ ಆಫ್ ಮಾಡಿ ಅದರ ಮೇಲೆ ಕಾಳುಮೆಣಸಿನ ಪುಡಿ ಸೇರಿಸಿದರೆ ರುಚಿಯಾದ ಗ್ರಿಲ್ಡ್ ಮಶ್ರೂಮ್ ಸವಿಯಲು ಸಿದ್ಧ.