ನ್ಯುಮೋನಿಯಾ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ವೈರಸ್ ಗಳಿಂದ ಉಂಟಾಗುವ ಶಾಸ್ವಕೋಶದ ಸೋಂಕಾಗಿದೆ. ಇದು ಉಸಿರಾಟದ ತೊಂದರೆ, ಜ್ವರ, ಕೆಮ್ಮು ಮತ್ತು ಶೀತಗಳಿಗೆ ಕಾರಣವಾಗುತ್ತದೆ. ಈ ನ್ಯುಮೋನಿಯಾ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
ಜೇನುತುಪ್ಪ : ನ್ಯುಮೊನಿಯಾ ಚಿಕಿತ್ಸೆಗೆ ಜೇನುತುಪ್ಪ ಬಹಳ ಸಹಕಾರಿ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಕೆಮ್ಮು, ಶೀತ, ಕಫದಂತಹ ನ್ಯುಮೊನಿಯಾ ಲಕ್ಷಣಗಳನ್ನು ನಿವಾರಿಸಲು ಸಹಕಾರಿಯಾಗಿದೆ.
ಅರಶಿನ : ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ನ್ಯುಮೊನಿಯಾದ ಪ್ರಾಥಮಿಕ ಲಕ್ಷಣವಾದ ಎದೆನೋವನ್ನು ನಿವಾರಿಸುತ್ತದೆ. ಇದು ಶ್ವಾಸಕೋಶದ ಲೋಳೆ ಅಂಶವನ್ನು ತೆಗೆದುಹಾಕಲು ಸಹಕಾರಿಯಾಗಿದೆ. ಇದರಿಂದ ಸುಲಭವಾಗಿ ಉಸಿರಾಡಬಹುದು.
ಶುಂಠಿ : ಇದು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಎದೆಯಲ್ಲಿರುವ ಕಫಗಳನ್ನು ಕರಗಿಸಿ ಹೊರಹಾಕುವುದರ ಮೂಲಕ ಎದೆನೋವನ್ನು ಕಡಿಮೆ ಮಾಡುತ್ತದೆ.