ತಿನ್ನೋದು ಹಾಗೂ ಕುಡಿಯುವ ವಿಚಾರಕ್ಕೆ ಬಂದರೆ ಭಾರತೀಯರನ್ನ ಮೀರಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಅದರಲ್ಲೂ ಹಬ್ಬ ಹರಿದಿನಗಳು ಬಂತು ಅಂದರೆ ಮನೆಯಲ್ಲಿ ತಯಾರಿಸುವ ಸಿಹಿ ಪದಾರ್ಥಗಳಿಗೆ ಡ್ರೈ ಫ್ರೂಟ್ಸ್ ಹಾಕಿಲ್ಲ ಅಂದರೆ ಭಾರತೀಯರಿಗೆ ಸಮಾಧಾನವೇ ಇಲ್ಲ. ಗೋಡಂಬಿ ಅಂದ್ರಂತೂ ಹೆಚ್ಚು ಕಮ್ಮಿ ಎಲ್ಲರಿಗೂ ಇಷ್ಟ. ಆದರೆ ಅತಿಯಾದ ಗೋಡಂಬಿ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು.
ಗೋಡಂಬಿ ತಿನ್ನೋಕೆ ರುಚಿ ಅನಿಸಿದ್ರೂ ಸಹ ಆರೋಗ್ಯಕ್ಕೆ ಅದು ಕಹಿಯೇ. ಗೋಡಂಬಿ ಸೇವನೆಯಿಂದ ದೇಹದ ತೂಕ ಹೆಚ್ಚಳವಾಗುತ್ತೆ. 3 ರಿಂದ 4 ಗೋಡಂಬಿ ಬರೋಬ್ಬರಿ 163 ಕ್ಯಾಲೋರಿಯನ್ನ ಹೊಂದಿರುತ್ತೆ. ವಯಸ್ಕರ ದೇಹಕ್ಕೆ ದಿನದಲ್ಲಿ 1500 ಎಂಜಿ ಸೋಡಿಯಂ ಅಂಶ ಹೋದರೆ ಸಾಕು. ಆದ್ರೆ ಗೋಡಂಬಿ ಸೇವನೆ ಮಾಡೋದ್ರಿಂದ ದೇಹದಲ್ಲಿ ಸೋಡಿಯಂ ಅಂಶ ಅಗತ್ಯಕ್ಕಿಂತ ಜಾಸ್ತಿ ಆಗುತ್ತೆ. ಇದು ಕಿಡ್ನಿ ಸಮಸ್ಯೆ, ಹೃದಾಯಾಘಾತ ಹಾಗೂ ರಕ್ತದೊತ್ತಡ ಸಮಸ್ಯೆ ತಂದೊಡ್ಡಬಹುದು.
3-4 ಸಾಲ್ಟಿ ಗೋಡಂಬಿಯಲ್ಲಿ 87 ಮಿಲಿಗ್ರಾಂ ಸೋಡಿಯಂ ಅಂಶ ಇರುತ್ತೆ. ಹೀಗಾಗಿ ಉಪ್ಪನ್ನ ಹಾಕದ ಗೋಡಂಬಿಯನ್ನ ಅಗತ್ಯವಿದ್ದಲ್ಲಿ ಸೇವಿಸಿ. ಇದು ಮಾತ್ರವಲ್ಲದೇ ಗೋಡಂಬಿಯಿಂದಾಗಿ ಕೆಲವರಿಗೆ ಫುಡ್ ಅಲರ್ಜಿ ಉಂಟಾಗಬಹುದು. ಕೆಲವರಿಗೆ ಗೋಡಂಬಿ ಸೇವನೆಯಿಂದ ತಲೆನೋವು ಕೂಡ ಬರಲಿದೆ.