ಪಾಲಕ್ ಸೊಪ್ಪು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಸೌಂದರ್ಯ ವೃದ್ಧಿಗೆ ಅದರಲ್ಲೂ ನೀಳ ಕೂದಲನ್ನು ನಿಮ್ಮದಾಗಿಸಿಕೊಳ್ಳಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ.
ಉದ್ದನೆಯ ಹಾಗೂ ದಪ್ಪನೆಯ ಕೂದಲು ಪಡೆಯಲು ಪಾಲಕ್ ಸೊಪ್ಪನ್ನು ತಂದು ಸ್ವಚ್ಛವಾಗಿ ತೊಳೆಯಿರಿ. ನಯವಾಗಿ ರುಬ್ಬಿ. ಬಳಿಕ ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ತೆಂಗಿನೆಣ್ಣೆ ಬೆರೆಸಿ ಚೆನ್ನಾಗಿ ಕಲಕಿ.
ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡದಿಂದ ತುದಿಯ ತನಕ ಸಂಪೂರ್ಣವಾಗಿ ಹಚ್ಚಿ. ಅರ್ಧ ಗಂಟೆ ಬಳಿಕ ಬೆಚ್ಚಗಿನ ನೀರಿನಿಂದ ತಲೆಕೂದಲನ್ನು ತೊಳೆಯಿರಿ. ಯಾವುದೇ ಶ್ಯಾಂಪೂ ಬಳಸದಿರಿ.
ಹೀಗೆ ಮಾಡುವುದರಿಂದ ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು ಮಾತ್ರವಲ್ಲ, ಉದ್ದಗಾಗಿ ಆಕರ್ಷಕವಾಗಿ ಬೆಳೆಯುತ್ತದೆ. ವಾರದಲ್ಲಿ ಎರಡರಿಂದ ಮೂರು ಬಾರಿ ಹೀಗೆ ಮಾಡಿದರೆ ಸಾಕು. ಮಿಶ್ರಣಕ್ಕೆ ನೆಲ್ಲಿಕಾಯಿ ಪುಡಿ ಸೇರಿಸಿದರೆ ಇನ್ನೂ ಹೆಚ್ಚಿನ ಲಾಭ ಪಡೆಯಬಹುದು.