ಇವರೇ ನಮ್ಮ ಬಾಳಸಂಗಾತಿ ಅಂತಾ ನಿರ್ಧರಿಸಿದ ಮೇಲೆ ಅವರ ಎದುರು ಹೋಗಿ ಪ್ರೇಮ ನಿವೇದನೆ ಮಾಡೋದು ಬಲು ಕಷ್ಟದ ಕೆಲಸ. ಅದರಲ್ಲೂ ಐ ಲವ್ ಯೂ ಅಂತಾ ಹೇಳೋಕೆ ಧೈರ್ಯ ಎಷ್ಟಿದ್ದರೂ ಸಾಲದು. ಕೆಲವೊಬ್ಬರಿಗೆ ಬಾಯಿ ಮಾತಲ್ಲಿ ಪ್ರೇಮ ನಿವೇದನೆ ಮಾಡೋಕೆ ಇಷ್ಟವಿರಲ್ಲ. ಅಂತವರು ಐ ಲವ್ ಯೂ ಅಂತಾ ಹೇಳದೇಯೇ ನಿಮ್ಮ ಪ್ರೀತಿ ಪಾತ್ರರಿಗೆ ಲವ್ ಸಿಗ್ನಲ್ ಕೊಡೋಕೆ ಕೆಲ ಪ್ಲಾನ್ಗಳು ಇಲ್ಲಿವೆ ನೋಡಿ.
ಸ್ವಲ್ಪ ಮಟ್ಟಿಗಾದರೂ ಫ್ಲರ್ಟ್ ಮಾಡೋದನ್ನ ರೂಢಿ ಮಾಡಿಕೊಳ್ಳಿ: ಹಾಗಂತ ಒಂದೇ ಸಲ ಫ್ಲರ್ಟ್ ಮಾಡೋಕೆ ಆರಂಭಿಸಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳಬೇಡಿ. ಈ ವಿಚಾರದಲ್ಲಿ ನೀವು ಅಂಬೆಗಾಲನ್ನ ಇಡಬೇಕು. ಆದಷ್ಟು ನಿಮ್ಮ ಪ್ರೀತಿಪಾತ್ರರನ್ನ ಹೊಗಳುತ್ತಿರಿ. ಅವರಿಗೆ ಜಗತ್ತಲ್ಲೇ ನಿಮಗಿಂತ ಸುಂದರ ಹಾಗೂ ವಿಶೇಷ ವ್ಯಕ್ತಿ ಯಾರೂ ಇಲ್ಲ ಎಂಬ ಭಾವನೆಯನ್ನ ಮೂಡಿಸಿ.
ಯಾವಾಗಲು ಎನರ್ಜಿಯಿಂದಿರಿ : ನಿಮ್ಮ ಪ್ರೀತಿ ಪಾತ್ರರಿಗೆ ಎಂದಿಗೂ ತಡವಾಗಿ ರಿಪ್ಲೈ ಮಾಡಬೇಡಿ. ಬೇಗ ಬೇಗ ರಿಪ್ಲೈ ಮಾಡೋದ್ರಿಂದ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುತ್ತೆ. ನಿಮಗೆ ಅವರೇ ನಿಮ್ಮ ಮೊದಲ ಆದ್ಯತೆ ಅನ್ನೋದನ್ನ ಸಾಬೀತು ಮಾಡಿ ತೋರಿಸಿ.
ನಿಕ್ ನೇಮ್ ಇಡಿ : ನಿಕ್ ನೇಮ್ ಇಟ್ಟು ನಿಮ್ಮ ಪ್ರೀತಿ ಪಾತ್ರರನ್ನ ಕರೆಯೋದ್ರಿಂದ ಅವರಿಗೆ ಸ್ಪೆಶಲ್ ಭಾವನೆ ಮೂಡುತ್ತೆ. ಅಲ್ಲದೇ ನಿಮ್ಮ ಇತಿಹಾಸ, ವೈಯಕ್ತಿಕ ಜೀವನ, ಸಿಕ್ರೇಟ್ಗಳನ್ನ ಶೇರ್ ಮಾಡಿದ್ರೂ ಕೂಡ ನಿಮಗೆ ಅವರ ಮೇಲೆ ಆಸಕ್ತಿ ಇದೆ ಎಂದು ಸೂಚಿಸುತ್ತೆ.