ದುಡ್ಡು ಯಾರಿಗೆ ಬೇಡ. ಕೈಯಲ್ಲಿ ನಾಲ್ಕಾಸು ಇದ್ದರೆ ಏನಕ್ಕಾದರೂ ಆಗುತ್ತದೆ ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗಂತ ಎಲ್ಲರಿಗೂ ಹೊರಗಡೆ ಹೋಗಿ ದುಡಿಯುವುದಕ್ಕೆ ಆಗುವುದಿಲ್ಲ ಅಂತವರು ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಮನೆಯ ತಿಂಗಳಿಡೀ ಖರ್ಚಿಗೆ ಇಂತಿಷ್ಟು ದುಡ್ಡು ಎಂದು ಎತ್ತಿಟ್ಟುಕೊಂಡಿರುತ್ತಿರಿ. ಆಗ ಅದರಲ್ಲಿ ಅನಗತ್ಯ ವಸ್ತುಗಳನ್ನು ತಂದು ಮನೆಯಲ್ಲಿ ತುಂಬಿಸಿಟ್ಟುಕೊಳ್ಳುವುದಕ್ಕಿಂತ ಎಷ್ಟು ಅಗತ್ಯನೋ ಅಷ್ಟು ಮಾತ್ರ ತೆಗೆದುಕೊಳ್ಳಿ.
ಕರಿದ ಪದಾರ್ಥವನ್ನು ಆದಷ್ಟು ಕಡಿಮೆ ಮಾಡಿ. ಇದರಿಂದ ಎಣ್ಣೆಯ ಖರ್ಚು ಉಳಿಯುತ್ತದೆ. ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಕರಿದ ತಿಂಡಿ ಮಾಡಿ.
ಲೈಟ್, ಫ್ಯಾನ್ ಅನ್ನು ಅಗತ್ಯ ಇದ್ದಾಗ ಮಾತ್ರ ಬಳಸಿ. ಉಪಯೋಗಿಸದೇ ಇದ್ದ ಸಮಯ ಆಫ್ ಮಾಡುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ.
ಇನ್ನು ರಿಸೆಲ್ಲಿಂಗ್ ಬ್ಯುಸಿನೆಸ್, ಸೀರೆಗೆ ಕುಚ್ಚು ಹಾಕುವುದು, ಮನೆಯಲ್ಲಿಯೇ ಏನಾದರು ಅಡುಗೆ ಮಾಡಿಕೊಡುವುದು, ಬೇಕಿಂಗ್, ಟೈಲರಿಂಗ್ ಮಾಡುವುದರಿಂದ ನಿಮ್ಮ ಖರ್ಚಿಗಾಗುವಷ್ಟು ದುಡ್ಡನ್ನು ಗಳಿಸಬಹುದು.