ಹಿಂದೂ ಧರ್ಮದಲ್ಲಿ ಗುರುವಾರ ವಿಷ್ಣುವಿನ ಆರಾಧನೆ ಮಾಡಲಾಗುತ್ತದೆ. ವಿಷ್ಣು ತನ್ನನ್ನು ಪೂಜಿಸುವ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆಂದು ನಂಬಲಾಗಿದೆ. ಹಿಂದೂ ಧರ್ಮಗ್ರಂಥದ ಪ್ರಕಾರ, ವಿಷ್ಣುವನ್ನು ಗುರುವಾರ ಸರಿಯಾದ ರೀತಿಯಲ್ಲಿ ಪೂಜಿಸುವುದ್ರಿಂದ ಜೀವನದ ಎಲ್ಲಾ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ಗುರುವಾರ ವಿಷ್ಣುವಿನ ಆರಾಧನೆಯನ್ನು ಸರಿಯಾಗಿ ಮಾಡಬೇಕು. ಓಂ ನಮೋ ನಾರಾಯಣ ಮಂತ್ರ ಜಪಿಸುವ ಮೂಲಕ ಪೂಜೆ ಶುರು ಮಾಡಬೇಕು. ಈ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಸಿಗುತ್ತದೆ. ಈ ದಿನ ಪೂಜೆಯಲ್ಲಿ ಹಾಲು, ಮೊಸರು ಮತ್ತು ತುಪ್ಪವನ್ನು ಬಳಸಬೇಕು. ಪೂಜೆ ದಿನ ಉಪವಾಸ ಮಾಡಬೇಕು.
ಸತತ ಏಳು ಗುರುವಾರ ಈ ಉಪವಾಸ ಮಾಡಿದರೆ ಎಲ್ಲ ಸಮಸ್ಯೆ ದೂರವಾಗುತ್ತದೆ. ಗುರುವಾರ ಉಪವಾಸ ಮಾಡುವುದ್ರಿಂದ ಸಂತೋಷ ಪ್ರಾಪ್ತಿಯಾಗುತ್ತದೆ. ಹಾಗೆ ಗುರುವಾರ ಕೂದಲನ್ನು ಕತ್ತರಿಸಬಾರದು. ಬಟ್ಟೆ ತೊಳೆಯಬಾರದು. ತಲೆ ಸ್ನಾನ ಮಾಡಬಾರದು. ಪೂಜೆಗೆ ಒಂದು ದಿನ ಮೊದಲು ಅಂದರೆ ಬುಧವಾರ ಸಂಜೆ ಇಡೀ ಮನೆಯನ್ನು ಸ್ವಚ್ಛಗೊಳಿಸಬೇಕು.
ಈ ದಿನ ಉಪವಾಸ ಮಾಡುವವರು ಉಪ್ಪು ತಿನ್ನಬಾರದು. ಹಳದಿ ಆಹಾರ ಪದಾರ್ಥಗಳಿಂದ ಮಾಡಿದ ಆಹಾರವನ್ನು ಬಳಸಬೇಕು. ಅಡುಗೆಗೆ ಹಸುವಿನ ತುಪ್ಪವನ್ನು ಬಳಸಿ. ದೇವರಿಗೆ ಅರ್ಪಿಸುವ ಹಣ್ಣುಗಳನ್ನು ತಿನ್ನದೆ ದಾನ ಮಾಡಬೇಕು.
ಲಕ್ಷ್ಮಿ ಮತ್ತು ನಾರಾಯಣ ಅವರನ್ನು ಒಟ್ಟಿಗೆ ಪೂಜಿಸಿ. ವಿಷ್ಣುವನ್ನು ಮಾತ್ರ ಪೂಜಿಸಬೇಡಿ. ಬಾಳೆ ಮರದ ಪೂಜೆಯನ್ನು ಗುರುವಾರ ಮಾಡಬೇಕು. ಬಾಳೆ ಹಣ್ಣುಗಳನ್ನು ಮಕ್ಕಳಿಗೆ ವಿತರಿಸಬೇಕು. ಇದು ಸಂತೋಷವನ್ನು ತರುತ್ತದೆ ಮತ್ತು ಎಲ್ಲಾ ರೀತಿಯ ಮಾನಸಿಕ ಒತ್ತಡವನ್ನು ತೆಗೆದು ಹಾಕಲಾಗುತ್ತದೆ.