ಮಧುಮೇಹಿಗಳು ವಹಿಸಿ ಆಹಾರದ ಬಗ್ಗೆ ಈ ಮುನ್ನೆಚ್ಚರಿಕೆ

ಹಲವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಆದರೆ ಎಲ್ಲಾ ಕಾರ್ಬೋಹೈಡ್ರೇಟ್ ಗಳು ಮಧುಮೇಹಿಗಳಿಗೆ ಕೆಟ್ಟದಲ್ಲ. ಕೆಲವು ಕಾರ್ಬೋಹೈಡ್ರೇಟ್ ನಿಮಗೆ ಅನುಕೂಲಕರವಾಗಿದೆ. ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅವು ಯಾವುದೆಂಬುದು ಇಲ್ಲಿದೆ ನೋಡಿ.

*ಹಣ್ಣುಗಳು : ಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ ಗಳಿರುತ್ತದೆ. ಆದರೆ ಇದರೊಂದಿಗೆ ನಿಮ್ಮ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅನೇಕ ಫೈಬರ್ ಯುಕ್ತ ಅಂಶವಿರುತ್ತದೆ. ಸ್ಟ್ರಾಬೆರಿ, ರಸ್ಬೆರಿ, ಬೆರಿ ಹಣ್ಣುಗಳನ್ನು ಮಧುಮೇಹಿಗಳು ಸೇವಿಸಬಹುದು.

*ತರಕಾರಿಗಳು : ತರಕಾರಿಗಳಲ್ಲಿ ಆರೋಗ್ಯಕರವಾದ ಕಾರ್ಬೋಹೈಡ್ರೇಟ್ ಗಳು ಮತ್ತು ಫೈಬರ್ ಗಳಿರುತ್ತದೆ. ಹಾಗಾಗಿ ಸೊಪ್ಪುಗಳು, ಕೋಸುಗಡ್ಡೆಯಂತಹ ತರಕಾರಿಗಳನ್ನು ಸೇವಿಸಬಹುದು.

*ಧಾನ್ಯಗಳು : ಧಾನ್ಯಗಳಲ್ಲಿ ಕೂಡ ಕಾರ್ಬೋಹೈಡ್ರೇಟ್ ಜೊತೆಗೆ ಫೈಬರ್ ಅಂಶವಿರುತ್ತದೆ. ಮಧುಮೇಹಿಗಳು ಧಾನ್ಯಗಳನ್ನು ಸೇವಿಸಿದರೆ ತುಂಬಾ ಒಳ್ಳೆಯದು. ಬಾರ್ಲಿ, ಗೋಧಿ, ಬ್ರೌನ್ ರೈಸ್, ಮುಂತಾದವುಗಳನ್ನು ಸೇವಿಸಬಹುದು. ಆದರೆ ಸಂಸ್ಕರಿಸಿದಂತಹ ಕಾರ್ಬೋಹೈಡ್ರೇಟ್ ಆಹಾರಗಳನ್ನು ತಪ್ಪಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read