ಆಹಾರಕ್ಕೆ ರುಚಿ ಕೊಡುವ ಸಂಗತಿಯಿಂದ ಆರಂಭಿಸಿ ಶೀತ ಕೆಮ್ಮು ಸಮಸ್ಯೆಯ ನಿವಾರಣೆಯ ತನಕ ಈರುಳ್ಳಿಯ ಪ್ರಯೋಜನಗಳು ಹಲವಾರು.
ಕೆಲವೊಮ್ಮೆ ಹಿಂದಿನ ರಾತ್ರಿಯೇ ತರಕಾರಿಗಳನ್ನು ಮೊದಲೇ ಕತ್ತರಿಸಿಡುವ ವೇಳೆ ಈರುಳ್ಳಿಯನ್ನೂ ಕತ್ತರಿಸಿಡುವ ಅಭ್ಯಾಸ ನಿಮಗಿದೆಯೇ. ಹಾಗಿದ್ದರೆ ಇಂದೇ ಇದನ್ನು ಬದಲಾಯಿಸಿ.
ಕತ್ತರಿಸಿಟ್ಟ ಈರುಳ್ಳಿ ಬ್ಯಾಕ್ಟೀರಿಯಾಗಳ ತವರು ಮನೆಯಾಗಬಹುದು. ಹೊಟ್ಟೆ ನೋವು, ವಾಂತಿ ಬೇಧಿ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಇದು ಫುಡ್ ಪಾಯ್ಸನಿಂಗ್ ಗೂ ಕಾರಣವಾಗಬಹುದು.
ಹಾಗಾಗಿ ಈರುಳ್ಳಿಯನ್ನು ಮಾತ್ರ ಫ್ರೆಶ್ ಆಗಿಯೇ ಕತ್ತರಿಸಿಕೊಳ್ಳಿ. ತಕ್ಷಣ ಆಹಾರಕ್ಕೆ ಬಳಸಿ. ಹಸಿ ನೀರುಳ್ಳಿ ಸೇವನೆಯಿಂದ ಶೀತ ಬಾಧೆ ದೂರವಾಗುತ್ತದೆ. ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ. ಹಿಮೋಗ್ಲೋಬಿನ್ ಪ್ರಮಾಣವನ್ನೂ ಏರಿಸುವ ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಆದರೆ ಕತ್ತರಿಸಿಟ್ಟ ಈರುಳ್ಳಿಯಲ್ಲಿ ಈ ಯಾವ ಪ್ರಯೋಜನಗಳೂ ಲಭಿಸದು ಬದಲಾಗಿ ಕೆಲವಷ್ಟು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಅರ್ಧ ಉಳಿಯಿತು ಎಂಬ ಕಾರಣಕ್ಕೆ ಅಥವಾ ಹೆಚ್ಚಾಯಿತು ಎಂಬ ನೆಪದಿಂದ ಅದನ್ನು ಫ್ರಿಜ್ ನಲ್ಲಿಟ್ಟು ನಾಳೆ ಬಳಸುವುದು ಖಂಡಿತಾ ಒಳ್ಳೆಯದಲ್ಲ. ಇದರಿಂದ ಸಮಸ್ಯೆಗಳಾಗುವ ಸಾಧ್ಯತೆಯೇ ಹೆಚ್ಚು.