
ಶುಂಠಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗಾಗಿ ಚಳಿಗಾಲದಲ್ಲಿ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಲು ಶುಂಠಿಯನ್ನು ಸೇವಿಸಿ ಎಂದು ಹೇಳುತ್ತಾರೆ.
ಇದು ಶೀತ, ಕಫ, ಕೆಮ್ಮು ಇನ್ನು ಹಲವು ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ ಎಂದು ಹೇಳುತ್ತಾರೆ. ಆದರೆ ಶುಂಠಿಯನ್ನು ಅತಿಯಾಗಿ ಸೇವಿಸಿದರೆ ಮಾತ್ರ ಈ ಸಮಸ್ಯೆಗಳು ಕಾಡುವುದು ಖಚಿತ.
*ಶುಂಠಿ ಹೃದಯಬಡಿತವನ್ನು ಹೆಚ್ಚಿಸುವುದರಿಂದ ಇದರಿಂದ ಹೃದಯಾಘಾತವಾಗುವ ಸಂಭವವಿದೆ, ಹಾಗಾಗಿ ಹೃದಯ ಸಂಬಂಧಿ ಕಾಯಿಲೆ ಇರುವವರು ಇದನ್ನು ಸೇವಿಸಬೇಡಿ.
*ಇದು ರಕ್ತವನ್ನು ತೆಳ್ಳಗೆ ಮಾಡುವುದರಿಂದ ರಕ್ತಸ್ರಾವದ ಸಮಸ್ಯೆ ಇರುವವರು ಇದನ್ನು ಸೇವಿಸಬೇಡಿ.
*ಶುಂಠಿಯನ್ನು ಅತಿಯಾಗಿ ಸೇವಿಸಿದರೆ ಗ್ಯಾಸ್ ಸಮಸ್ಯೆ ಉಂಟಾಗಿ ಎದೆಯುರಿ, ಹೊಟ್ಟೆ ನೋವು, ಸಮಸ್ಯೆ ಕಾಡುತ್ತದೆ.
*ಹೆಚ್ಚು ಶುಂಠಿ ಸೇವನೆಯಿಂದ ಅತಿಸಾರ ಮತ್ತು ವಾಂತಿಯಾಗಬಹುದು.
*ಶುಂಠಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದನ್ನು ಮಧುಮೇಹಿಗಳು ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಶುಗರ್ ತುಂಬಾ ಕಡಿಮೆಯಾಗಿ ಸಮಸ್ಯೆಗೆ ಒಳಗಾಗಬಹುದು.
*ಗರ್ಭಾವಸ್ಥೆಯಲ್ಲಿ ಶುಂಠಿಯನ್ನು ಅತಿಯಾಗಿ ಸೇವಿಸಿದರೆ ಮಗುವಿಗೆ ಅಪಾಯವನ್ನುಂಟುಮಾಡಬಹುದು. ರಕ್ತಸ್ರಾವ, ವಾಕರಿಕೆ, ಕಡಿಮೆ ರಕ್ತದೊತ್ತಡ ಸಮಸ್ಯೆ ಕಾಡಬಹುದು.
*ಅತಿಯಾದ ಶುಂಠಿ ಸೇವನೆ ಚರ್ಮದ ಮೇಲೆ ದದ್ದುಗಳು ಮೂಡಲು, ಚರ್ಮದ ಅಲರ್ಜಿಗೆ ಕಾರಣವಾಗಬಹುದು.
*ಶುಂಠಿ ಅತಿಯಾಗಿ ಸೇವಿಸಿದರೆ ಕಣ್ಣಿನಲ್ಲಿ ಶುಷ್ಕತೆ ಉಂಟಾಗಿ ಕಣ್ಣಿನ ಸಮಸ್ಯೆ ಕಾಡಬಹುದು.