ಕೆಲವರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರು ಹೆಚ್ಚಿನ ಫೈಬರ್ ಇಲ್ಲದ ಆಹಾರವನ್ನು ಸೇವಿಸುವುದರಿಂದ ಹಾಗೂ ಸರಿಯಾಗಿ ನೀರನ್ನು ಕುಡಿಯದ ಕಾರಣ ಈ ಸಮಸ್ಯೆಗೆ ಒಳಗಾಗುತ್ತಾರೆ. ಇದು ಕರುಳು, ಜೀರ್ಣಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದ ಈ ಹಣ್ಣುಗಳನ್ನು ಸೇವಿಸಿ.
*ಕಿತ್ತಳೆ : ಕಿತ್ತಳೆ ಹಣ್ಣು ಫೈಬರ್ ನ್ನು ಹೊಂದಿರುತ್ತದೆ. ಇದು ಕರಗಬಲ್ಲ ನಾರಿನ ಸಮೃದ್ಧ ಮೂಲವಾಗಿದೆ. ಇದನ್ನು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
*ಪೇರಳೆ ಹಣ್ಣು : ಚಳಿಗಾಲದಲ್ಲಿ ಸಿಗುವ ಈ ಹಣ್ಣಿನಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ.
*ದ್ರಾಕ್ಷಿ : ಇದರಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇವುಗಳನ್ನು ಪ್ರತಿದಿನ ಸೇವಿಸುವುದರಿಂದ ಕರುಳಿನ ಚಲನೆ ಸರಾಗವಾಗಿ ಆಗಿ ಮಲಬದ್ಧತೆ ನಿವಾರಣೆಯಾಗುವುದು.
*ಸೇಬು : ಇದರಲ್ಲಿ ಫೈಬರ್ ಅಧಿಕವಾಗಿದೆ. ಇದನ್ನು ಪ್ರತಿದಿನ ಸೇವಿಸಿದರೆ ಮಲಬದ್ಧತೆ ಸಮಸ್ಯೆ ಹತ್ತಿರವೂ ಸುಳಿಯಲ್ಲ.