ವಿಶ್ವದ ಅರ್ಧದಷ್ಟು ಜನರಿಗೆ ಅಕ್ಕಿ ಪ್ರಧಾನ ಆಹಾರವಾಗಿದೆ. ಅಕ್ಕಿಯನ್ನು ಹೆಚ್ಚಿನ ಅಡುಗೆ, ಸಿಹಿತಿಂಡಿ ತಯಾರಿಕೆಯಲ್ಲಿ ಬಳಸುತ್ತಾರೆ. ಆದರೆ ಅಕ್ಕಿಯಲ್ಲಿ ಹಲವು ಬಗೆಗಳಿವೆ. ಆದರೆ ಅದರಲ್ಲಿ ತೂಕ ಇಳಿಸಿಕೊಳ್ಳಲು ಕಂದು ಅಕ್ಕಿ ಮತ್ತು ಬಿಳಿ ಅಕ್ಕಿಯಲ್ಲಿ ಯಾವುದು ಉತ್ತಮ? ಎಂಬುದನ್ನು ತಿಳಿದುಕೊಳ್ಳಿ.
ಅಕ್ಕಿಯ ಹೊಟ್ಟು ತೆಗೆದು ಹೊಳಪು ನೀಡಿದಾಗ ಬಿಳಿ ಅಕ್ಕಿ ತಯಾರಾಗುತ್ತದೆ. ಇದರಲ್ಲಿ ಶೇ.90ರಷ್ಟು ಕಾರ್ಬೋಹೈಡ್ರೇಟ್ ಗಳಿವೆ, ಶೇ.2ರಷ್ಟು ಕೊಬ್ಬು, ಶೇ.8ರಷ್ಟು ಪ್ರೋಟೀನ್ ಇರುತ್ತದೆ. ಹಾಗೇ ಕಂದು ಅಕ್ಕಿ ನೈಸರ್ಗಿಕವಾಗಿದೆ. ಈ ಅಕ್ಕಿ ಹೆಚ್ಚು ಪೋಷಕಾಂಶಗಳಿಂದ ಕೂಡಿರುತ್ತದೆ. ಇದು ಬಿಳಿ ಅಕ್ಕಿಗಿಂತ ಹೆಚ್ಚು ಕೊಬ್ಬು, ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿದೆ.
ಆದರೆ ತೂಕ ನಷ್ಟವಾಗಲು ಕಂದು ಅಕ್ಕಿ ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಇದು ಕಡಿಮೆ ಕ್ಯಾಲೋರಿ, ಹೆಚ್ಚು ಫೈಬರ್ ನ್ನು ಹೊಂದಿದೆ. ಇದು ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಲು ಸಹಕಾರಿಯಾಗಿದೆ. ಮತ್ತು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.