ಸ್ಕಿನ್ ಟ್ಯಾಗ್ ಸಾಮಾನ್ಯವಾಗಿ ಚರ್ಮದ ಕೋಶಗಳು, ನರ ಕೊಶಗಳು, ಕೊಬ್ಬು ಮತ್ತು ರಕ್ತನಾಳಗಳ ಸಂಯೋಜನೆಯಿಂದ ಕೂಡಿದೆ. ಅವು ನಿಮ್ಮ ಚರ್ಮದ ಬಣ್ಣದಲ್ಲಿ ಅಥವಾ ಕೆಂಪು ಬಣ್ಣದಲ್ಲಿರುತ್ತದೆ. ಇವುಗಳನ್ನು ತೆಗೆದು ಹಾಕಲು ಈ ಮನೆಮದ್ದನ್ನು ಹಚ್ಚಿ.
ಸಾಮಾನ್ಯವಾಗಿ ಸ್ಕಿನ್ ಟ್ಯಾಗ್ ಗಳನ್ನು ವೈದ್ಯರು ಲೇಸರ್ ಥೆರಪಿಯ ಮೂಲಕ ತೆಗೆದು ಹಾಕುತ್ತಾರೆ. ಆದರೆ ಮನೆಯಲ್ಲಿಯೇ ನಾವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸ್ಕಿನ್ ಟ್ಯಾಗ್ ಗಳನ್ನು ತೆಗೆದು ಹಾಕಬಹುದು.
ಟೀ ಟ್ರೀ ಆಯಿಲ್, ಬೆಳ್ಳು್ಳ್ಳಿ, ಆಪಲ್ ಸೈಡರ್ ವಿನೆಗರ್ ಈ ಮೂರು ವಸ್ತುಗಳಲ್ಲಿ ಯಾವುದಾದರು ಒಂದನ್ನು ಸ್ಕಿನ್ ಟ್ಯಾಗ್ ಗೆ ಹಚ್ಚಿ ಅದರ ಮೇಲೆ ಬ್ಯಾಂಡೇಜ್ ಕಟ್ಟಿಕೊಳ್ಳಬೇಕು. ಇದು ಕರಗುವಾಗ ನೋವಿನಿಂದ ಕೂಡಿರುತ್ತದೆ. ಆದರೆ ಪ್ರತಿದಿನ ಹೀಗೇ ಮಾಡುತ್ತಾ ಬಂದರೆ ಒಂದೇ ವಾರದಲ್ಲಿ ಇದು ಉದುರಿ ಹೋಗುತ್ತದೆ.